ADVERTISEMENT

ದೊಡ್ಡಮ್ಮತಾಯಿ ದೇವಾಲಯ: ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 3:15 IST
Last Updated 28 ಜನವರಿ 2026, 3:15 IST
ಬೆಟ್ಟದಪುರ ಸಮೀಪದ ಬೆಟ್ಟದತುಂಗ ಗ್ರಾಮದ ದೊಡ್ಡಮ್ಮತಾಯಿ ದೇವಾಲಯಕ್ಕೆ ತಳಿಗೆ ಸೇವೆ ಮಾಡುವ ಸ್ಥಳದ ಅಭಿವೃದ್ಧಿ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಅರಸ್ ಚಾಲನೆ ನೀಡಿದರು
ಬೆಟ್ಟದಪುರ ಸಮೀಪದ ಬೆಟ್ಟದತುಂಗ ಗ್ರಾಮದ ದೊಡ್ಡಮ್ಮತಾಯಿ ದೇವಾಲಯಕ್ಕೆ ತಳಿಗೆ ಸೇವೆ ಮಾಡುವ ಸ್ಥಳದ ಅಭಿವೃದ್ಧಿ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಅರಸ್ ಚಾಲನೆ ನೀಡಿದರು   

ಬೆಟ್ಟದಪುರ: ಸಮೀಪದ ಬೆಟ್ಟದತುಂಗ ಗ್ರಾಮದ ದೊಡ್ಡಮ್ಮತಾಯಿ ದೇವಾಲಯಕ್ಕೆ ತಳಿಗೆ ಸೇವೆ ಮಾಡಲು ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಅರಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ತಳಿಗೆ ಸೇವೆ ಸ್ಥಳದ ಕಾಮಗಾರಿ ಪೂರ್ಣಗೊಂಡ ಬಳಿಕ ದೇವಾಲಯದಲ್ಲಿ ಅನ್ನಪ್ರಸಾದ ತಯಾರಿ ಹಾಗೂ ಹರಕೆ ಸೇವೆಗಳನ್ನು ಸುಸೂತ್ರವಾಗಿ ನಡೆಸಲು ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಕಾಮಗಾರಿಯನ್ನು ವೈಯಕ್ತಿಕವಾಗಿ, ಸರ್ವಸದಸ್ಯರ ಸಹಕಾರದಿಂದ, ಗ್ರಾಮಸ್ಥರ ಒಪ್ಪಿಗೆಯ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯಿಂದ ದೇವಾಲಯಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಸಲಾಗಿದೆ’ ಎಂದರು.

ಪಿಡಿಒ ಚೇತನ್, ಕಾರ್ಯದರ್ಶಿ ಚಂದ್ರಹಾಸ, ಸದಸ್ಯರಾದ ಸ್ವಾಮಿ, ಕುಮಾರ, ರವಿ, ಸತೀಶ್, ಮಾದೇವ್, ರೇಣುಕಾ, ಬಿಂದು, ರತ್ನಮ್ಮ, ಅಣ್ಣಯ್ಯ, ಆನಂದ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.