
ಬೆಳಕವಾಡಿ: ಸಮೀಪದ ಅಂತರಾಯನಪುರದದೊಡ್ಡಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ಸಾಕಿದ್ದ ಕತ್ತೆ ಮೇಲೆ ಶನಿವಾರ ರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.
ಮುತ್ತು ಅವರ ತೋಟದ ಮನೆಯಲ್ಲಿ ಸಾಕಿದ್ದ ಮೂರು ಕತ್ತೆಗಳ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿದ ಚಿರತೆ ಕತ್ತೆಯೊಂದನ್ನು ಕೊಂದು ಎಳೆದೊಯ್ಯುವಾಗ ನಾಯಿಗಳ ಚೀರಾಟ ಕೇಳಿ ಮನೆಯ ಮಾಲೀಕ ಬಂದು ನೋಡಿದಾಗ ಚಿರತೆ ಕತ್ತೆ ಬಿಟ್ಟು ಪರಾರಿಯಾಗಿದೆ.
‘ತೋಟದ ಸುತ್ತಮುತ್ತ ಮೂರು ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ಇದ್ದರಿಂದ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಸುಮಾರು ₹ 12 ಸಾವಿರ ಬೆಲೆ ಬಾಳುವ ಕತ್ತೆ ಮೃತ ಪಟ್ಟಿದ್ದು ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು’ ಎಂದು ಮಾಲೀಕ ಮುತ್ತು ಒತ್ತಾಯಿಸಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ತೋಟದ ಮನೆಯಲ್ಲಿ ವಾಸಿಸುವ ಜನರಿಗೆ ಜೀವಭಯದ ವಾತಾವರಣ ಉಂಟಾಗಿದೆ. ಸಾಕುಪ್ರಾಣಿಗಳನ್ನು ರಕ್ಷಿಸುವುದು ಕಷ್ಟವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಚಿರತೆ ಸೆರೆಗೆ ಮುಂದಾಗಬೇಕು’ ಎಂದು ತೋಟದ ಮನೆಯ ಎಸ್. ರಾಜು, ಮುತ್ತು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.