ADVERTISEMENT

‘ಅಂಕಗಳಿಂದ ಪ್ರತಿಭೆ ಅಳೆಯಬಾರದು’

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 6:37 IST
Last Updated 11 ಅಕ್ಟೋಬರ್ 2020, 6:37 IST
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಚಂದ್ರಗುಪ್ತ, ಶಿವಾನಂದ ತಗಡೂರು, ಹರೀಶ್‌ ಗೌಡ, ಸಿ.ಕೆ.ಮಹೇಂದ್ರ, ಕೆ.ಜೆ.ಲೋಕೇಶ್‍ಬಾಬು ಇದ್ದರು
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಚಂದ್ರಗುಪ್ತ, ಶಿವಾನಂದ ತಗಡೂರು, ಹರೀಶ್‌ ಗೌಡ, ಸಿ.ಕೆ.ಮಹೇಂದ್ರ, ಕೆ.ಜೆ.ಲೋಕೇಶ್‍ಬಾಬು ಇದ್ದರು   

ಮೈಸೂರು: ‘ಮಕ್ಕಳ ಪ್ರತಿಭೆಯನ್ನು ಅಂಕ ಗಳಿಂದ ಅಳೆಯಬಾರದು. ಅವರಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸುವ ಪರೀಕ್ಷಾ ವ್ಯವಸ್ಥೆ ಅಳವಡಿಸಬೇಕು’ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ವತಿ ಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಮದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಪರೀಕ್ಷೆಯಲ್ಲಿ ದೊರೆಯುವ ಅಂಕಗಳು ಪ್ರತಿಭೆಯ ಮಾನದಂಡವೇ ಎಂಬ ಪ್ರಶ್ನೆಯನ್ನು ಶಿಕ್ಷಕರು, ಪೋಷ ಕರು ಹಾಕಿಕೊಳ್ಳಬೇಕು. ಈಗ ನೂರಕ್ಕೆ ನೂರು ಅಂಕ ಗಳಿಸುವುದು ಸಾಮಾನ್ಯ ಎಂಬಂತಾಗಿದೆ. ಅಂಕಗಳನ್ನು
ನಿರ್ಧರಿ ಸುವ ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂಬ ಅನುಮಾನ ಮೂಡುತ್ತದೆ. ಇದ ರಲ್ಲಿ ವಿದ್ಯಾರ್ಥಿಗಳ ತಪ್ಪಿಲ್ಲ ಎಂದರು.

ADVERTISEMENT

ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು. ಮಕ್ಕಳು ಎಲ್ಲ ವಿಷಯಗಳಲ್ಲೂ ಪರಿಣತಿ ಹೊಂದಿರುವುದಿಲ್ಲ. ಆದರೆ, ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪರಿಚಯಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಪುರಸ್ಕಾರ: ಪಿಯುಸಿ ವಿಭಾಗದಲ್ಲಿ ಡಿ.ಎನ್.ಪೂಜಾ, ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ರಿಷಿತಾ ನಾಗೇಂದ್ರಕುಮಾರ್, ಎಂ.ಆರ್.ಚಂದನ್‌ಗೌಡ, ಎಲ್.ಗಗನ್, ಎಸ್.ಕೀರ್ತನಾ, ಎಸ್.ಪಿ.ಸಮೃದ್ಧ, ನೇಸರ ಅಮಿನಗಡ, ಆರ್.ಹರ್ಷಿತಾ, ಬಿ.ಎಂ.ವಿಶ್ವಾಸ್ ಗೌಡ, ಅಮೃತ ಡಿ.ಆರಾಧ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದಿಂದ ದಿ.ರಾಜಶೇಖರ್ ಕೋಟಿ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದು, ಪ್ರತಿ ವರ್ಷ ಇದನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‍ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.