ADVERTISEMENT

ಡಾ.ಬಾಬು ಜಗಜೀವನ ರಾಂ ಸ್ಮರಣೆ | ಜೀವನ, ಸಾಧನೆ ದೇಶಕ್ಕೆ ಮಾದರಿ: ಶಾಸಕ ರವಿಶಂಕರ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:19 IST
Last Updated 7 ಜುಲೈ 2025, 2:19 IST
ಕೆ.ಆರ್.ನಗರದಲ್ಲಿ ಡಾ.ಬಾಬು ಜಗಜೀವನ ರಾಂ ಅವರ 39ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರತಿಮೆಗೆ ಶಾಸಕ ಡಿ.ರವಿಶಂಕರ್ ಭಾನುವಾರ ಮಾಲಾರ್ಪಣೆ ಮಾಡಿದರು
ಕೆ.ಆರ್.ನಗರದಲ್ಲಿ ಡಾ.ಬಾಬು ಜಗಜೀವನ ರಾಂ ಅವರ 39ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರತಿಮೆಗೆ ಶಾಸಕ ಡಿ.ರವಿಶಂಕರ್ ಭಾನುವಾರ ಮಾಲಾರ್ಪಣೆ ಮಾಡಿದರು   

ಕೆ.ಆರ್.ನಗರ: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜೀವನ ಮತ್ತು ಸಾಧನೆ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

 ಭಾನುವಾರ ಇಲ್ಲಿ ನಡೆದ ಡಾ.ಬಾಬು ಜಗಜೀವನ ರಾಂ ಅವರ 39ನೇ ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿದರು.

‘ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನ ರಾಂ ಸಮುದಾಯ ಭವನಕ್ಕಾಗಿ ₹1ಕೋಟಿ ಅನುದಾನ ಪಡೆದು ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ನನ್ನ ಅವದಿಯಲ್ಲಿಯೇ ಲೋಕಾರ್ಪಣೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.  ಬೇರೆಯವರಂತೆ ಸಬೂಬು ಹೇಳಿಕೊಂಡು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದಿಲ್ಲ. ಮತದಾರರು ನೀಡಿರುವ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆಎಂದರು.

ADVERTISEMENT

ಪುಣ್ಯಸ್ಮರಣೆಯಲ್ಲಿ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರಿಗೆ ಸೂಚನೆ ನೀಡಿದರು. ಕೆ.ಆರ್.ನಗರ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಸಾಲಿಗ್ರಾಮ  ತಹಶೀಲ್ದಾರ್ ಎನ್.ಎಸ್.ನರಗುಂದ, ಮುಖಂಡರಾದ ಎಂ.ಎಚ್.ಸ್ವಾಮಿ, ಡಿ.ಕಾಂತರಾಜು, ತಾಲ್ಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್ ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ.ಜವರೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಆನಂದ್, ಸದಸ್ಯರಾದ ಸರೋಜಾ ಮಹದೇವ್, ಮಿಕ್ಸರ್ ಶಂಕರ್, ಶಂಕರ್ ಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ತಾಲ್ಲೂಕು ಎಂಎಸ್ಎಸ್ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಚ್.ಕುಮಾರ್, ಕಾರ್ಯದರ್ಶಿ ಕಂಚುಗಾರಕೊಪ್ಪಲು ಸ್ವಾಮಿ, ಗೊರಗುಂಡಿ ಶ್ರೀನಿವಾಸಪ್ರಸಾದ್, ಮುಖಂಡರಾದ ತಿಮ್ಮಶೆಟ್ಟಿ, ಮಾರಗೌಡನಹಳ್ಳಿ ರಾಜೇಶ್, ಕರ್ಣಕುಮಾರ್, ದಾಸಪ್ರಕಾಶ್, ಎಂ.ಎ.ನಾಗೇಂದ್ರ, ವೆಂಕಟೇಶ್, ರವಿಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.