ADVERTISEMENT

ಸಾಲಿಗ್ರಾಮ: ಭೂ ದಾಖಲೆ ಗಣಕೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 13:04 IST
Last Updated 13 ಜನವರಿ 2025, 13:04 IST
ಸಾಲಿಗ್ರಾಮ, ಕೆ.ಆರ್.ನಗರ ತಾಲ್ಲೂಕುಗಳ ರೈತರ ಭೂಮಿಯ ದಾಖಲೆಗಳ ಗಣಕೀಕರಣಕ್ಕೆ ಶಾಸಕ ಡಿ.ರವಿಶಂಕರ್ ಸೋಮವಾರ ಚಾಲನೆ ನೀಡಿದರು. ತಹಶೀಲ್ದಾರ್‌ಗಳಾದ ಸುರೇಂದ್ರಕುಮಾರ್, ಎಸ್‌.ಎನ್‌.ನರಗುಂದ ಪಾಲ್ಗೊಂಡಿದ್ದರು
ಸಾಲಿಗ್ರಾಮ, ಕೆ.ಆರ್.ನಗರ ತಾಲ್ಲೂಕುಗಳ ರೈತರ ಭೂಮಿಯ ದಾಖಲೆಗಳ ಗಣಕೀಕರಣಕ್ಕೆ ಶಾಸಕ ಡಿ.ರವಿಶಂಕರ್ ಸೋಮವಾರ ಚಾಲನೆ ನೀಡಿದರು. ತಹಶೀಲ್ದಾರ್‌ಗಳಾದ ಸುರೇಂದ್ರಕುಮಾರ್, ಎಸ್‌.ಎನ್‌.ನರಗುಂದ ಪಾಲ್ಗೊಂಡಿದ್ದರು   

ಸಾಲಿಗ್ರಾಮ: ಸಾಲಿಗ್ರಾಮ, ಕೆ.ಆರ್.ನಗರ ತಾಲ್ಲೂಕುಗಳ ರೈತಾಪಿ ವರ್ಗದ ಭೂ ದಾಖಲೆಗಳ ಗಣಕೀಕರಣ ಮಾಡುವ ಭೂ ಸುರಕ್ಷಾ ಯೋಜನೆಗೆ ಶಾಸಕ ಡಿ.ರವಿಶಂಕರ್ ಸೋಮವಾರ ಚಾಲನೆ ನೀಡಿದರು.

‘ರೈತ ಸಮುದಾಯವು ತಮ್ಮ ಜಮೀನಿನ ದಾಖಲೆಗಳನ್ನು ಯಾವುದೇ ಕುಳಿತ ಸ್ಥಳದಲ್ಲೇ ನೋಡಬಹುದಾದ ಸರಳೀಕೃತ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನು ತಿದ್ದುವ ಅಥವಾ ಬದಲಾಯಿಸಲು ಸಾಧ್ಯವಿಲ್ಲ. ಇದರಿಂದ ದಾಖಲೆಗಳ ಬಗ್ಗೆ ಇರುವ ಗೊಂದಲ ನಿವಾರಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅವಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಭೂಮಿ ವಿಸ್ತೀರ್ಣವನ್ನು ಗಣಕೀಕೃತ ಮಾಡುವ ವೇಳೆ ಸಿಬ್ಬಂದಿ ಜಾಗರೂಕರಾಗಿ ಕೆಲಸ ನಿರ್ವಹಿಸಬೇಕು. ಈ ಹಿಂದೆ ಕೈತಪ್ಪಿನಿಂದ ಆಗುತ್ತಿದ್ದ ವ್ಯತ್ಯಾಸದಿಂದ ಕೆಲವು ರೈತರು ಜಮೀನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿತು. ಗಣಕೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಕೆ.ಆರ್.ನಗರ ತಹಶೀಲ್ದಾರ್ ಸುರೇಂದ್ರಕುಮಾರ್, ಸಾಲಿಗ್ರಾಮ ತಹಶೀಲ್ದಾರ್ ಎಸ್‌.ಎನ್‌.ನರಗುಂದ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.