ADVERTISEMENT

ಮುರುಘಾ ಶರಣರ ಬಂಧನಕ್ಕೆ ಒತ್ತಾಯ: ಎಸ್ಐಟಿ ತನಿಖೆಗೆ ದಸಂಸ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 10:22 IST
Last Updated 30 ಆಗಸ್ಟ್ 2022, 10:22 IST
ಚಿತ್ರದುರ್ಗದ ಮುರುಘಾ ಶರಣರು
ಚಿತ್ರದುರ್ಗದ ಮುರುಘಾ ಶರಣರು   

ಮೈಸೂರು:‘ಅತ್ಯಾಚಾರದ ಆರೋಪ ಹೊತ್ತಿರುವಚಿತ್ರದುರ್ಗದ ಮುರುಘಾ ಶರಣರನ್ನು ಕೂಡಲೇ ಬಂಧಿಸಬೇಕು. ಪ್ರಕರಣವನ್ನು ಕೂಡಲೇ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಒಳಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟ ಒತ್ತಾಯಿಸಿದೆ.

ದಸಂಸರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ‘ಆರೋಪಕ್ಕೆ ತುತ್ತಾಗಿರುವ ಸ್ವಾಮೀಜಿಯನ್ನು ಇದುವರೆಗೂ ಬಂಧಿಸಿಲ್ಲ. ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ.‌ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಕೂಡ ಕ್ಲೀನ್ ಚಿಟ್ ಕೊಡುವ ಕೆಲಸ ನಡೆಸಿದ್ದಾರೆ. ಈ ಕಾರಣದಿಂದ ನಿವೃತ್ತ ‌ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನೇಮಿಸಿ,ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ‌ಪ್ರಕರಣವನ್ನು ಬಿಜೆಪಿಯೇತರ ಆಡಳಿತ ನಡೆಸುವ ಕೇರಳ,ತಮಿಳುನಾಡಿಗೆ ಪ್ರಕರಣ ವರ್ಗಾಯಿಸಬೇಕು’ಎಂದುಮಂಗಳವಾರ ಮೈಸೂರಿನಲ್ಲಿ ನಡೆಸಿದಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು

ಬೃಹತ್‌ ಜನಾಂದೋಲನಕ್ಕೆ ನಿರ್ಧಾರ:‘ಅತ್ಯಾಚಾರದ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವೇ ಯತ್ನಿಸುತ್ತಿದ್ದು,ಇದರ ವಿರುದ್ಧ ಬಹತ್‌ ಜನಾಂದೋಲನಕ್ಕೆ ದಸಂಸ ನಿರ್ಧರಿಸಿದೆ. ಈ ಕುರಿತಂತೆ ಆ.31ರಂದು ಪೂರ್ವಭಾವಿ ಸಭೆ ನಡೆಸಲಿದೆ. ಸೆ.4ರಂದು ಬೆಂಗಳೂರಿನ ಗಾಂಧಿಭವನದಲ್ಲಿ ದಲಿತ,ಕಾರ್ಮಿಕ ಮಹಿಳಾ ಸಂಘಟನೆಗಳು,ಸಭೆ ಸೇರಿ ಚರ್ಚೆ ನಡೆಸಿ,ಬೃಹತ್‌ ಜನಾಂದೋಲನ ರೂಪಿಸಲಾಗುವುದು’ಎಂದು ಗುರುಪ್ರಸಾದ್‌ ತಿಳಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಮಾತನಾಡಿ, ‘12ನೇ ಶತಮಾನದಲ್ಲಿ ಕ್ರಾಂತಿ ಮೂಲಕ ಹುಟ್ಟಿದ್ದಬಸವಾದಿ ಶರಣ ಮಠವುಅಧೋಗತಿಗೆ ತಲುಪಿರುವುದು ಸಾಮಾನ್ಯ ಜನರಿಗೆ ವಾಕರಿಕೆ ಬರುವಂತಾಗಿದೆ. ಇದು ಕೇವಲ2ಮಕ್ಕಳ ಪ್ರಶ್ನೆ ಅಲ್ಲ. ಗ್ರಾಮೀಣ ಭಾಗದಿಂದ ವಿದ್ಯಾಭ್ಯಾಸಕ್ಕೆ ಬಂದ ಬಡ ಸಮಾಜದ ಹೆಣ್ಣುಮಕ್ಕಳನ್ನುಸ್ವಾಮೀಜಿಅವರುಈ ರೀತಿ ಬಳಸಿಕೊಂಡಿರುವುದು. ಅಸಹ್ಯ ಹುಟ್ಟಿಸಿದೆ. ಮಕ್ಕಳು ಹೇಳುತ್ತಿರುವ ನೋವುಸರ್ಕಾರಕ್ಕೆ ಕೇಳಿಸುತ್ತಿಲ್ಲವೆ?ಎಂದು‌ ಖಾರವಾಗಿ ಪ್ರಶ್ನಿಸಿದರು.

ರಾಜೀನಾಮೆ‌ ನೀಡಲಿ:‘ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸ್ವಾಮೀಜಿ ಪರ ವಹಿಸಿಕೊಂಡು ಮಾತನಾಡುತ್ತಿದ್ದಾರೆ.ಆ ಮೂಲಕ ತನಿಖೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು,ಅವರಿಗೆಜ್ಞಾನ ಇದ್ದರೆ ತಕ್ಷಣ ರಾಜೀನಾಮೆ ಕೊಡಲಿ‌’ಎಂದು‌ ಒತ್ತಾಯಿಸಿದರು.

ಎಚ್‌ಡಿಕೆಬಂಧಿಸಿ:
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕಎಚ್.ಡಿ.ಕುಮಾರಸ್ವಾಮಿಅವರುಈಪ್ರಕರಣದಬಗ್ಗೆಆರುತಿಂಗಳ‌ಮೊದಲೇತಿಳಿದಿತ್ತು‌ಎಂದು‌ಹೇಳಿಕೆನೀಡಿದ್ದಾರೆ. ಪೋಸ್ಕೊಕಾಯ್ದೆಪ್ರಕಾರ,ಅತ್ಯಾಚಾರದಮಾಹಿತಿಮುಚ್ಚಿಡುವುದುಕೂಡಅಪರಾಧ.ಅವರನ್ನುಕೂಡಲೇಬಂಧಿಸಬೇಕು’ಎಂದುಮಾವಳ್ಳಿ ಶಂಕರ್‌ಆಗ್ರಹಿಸಿದರು.

‘ಸುಳ್ಳುಹೇಳಲುಯಾವುದೇಮಕ್ಕಳುಒಪ್ಪುವುದಿಲ್ಲ.ಆದರೂ,ಕಳಂಕಹೊತ್ತಸ್ವಾಮೀಜಿಯನ್ನುರಕ್ಷಣೆಮಾಡಲುಸರ್ಕಾರಹೊರಟಿದೆ.ಈಸರ್ಕಾರಕ್ಕೆಮಾನ ಮರ್ಯಾದೆಇದೆಯಾ.. ನಿಷ್ಪಕ್ಷಪಾತತನಿಖೆನಡೆಸಲಿ,ಇಲ್ಲದಿದ್ದರೆ,ರಾಜೀನಾಮೆನೀಡಿಹೊರನಡೆಯಲಿ’ಎಂದುದಲಿತಸಂಘರ್ಷಸಮಿತಿಯಮಹಿಳಾಸಂಚಾಲಕಿವಸಂತಹೊನ್ನೇನಹಳ್ಳಿಕಿಡಿಕಾರಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ,ಸಂಘಟನೆಯಧನರಾಜ್‌,ಮುನಿರಾಜು,ಕಲ್ಲಹಳ್ಳಿ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.