ADVERTISEMENT

ಇ–ಖಾತೆ ವಿತರಣೆ: ಮೈಸೂರಿಗೆ ಅಗ್ರ ಸ್ಥಾನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 3:17 IST
Last Updated 23 ಆಗಸ್ಟ್ 2025, 3:17 IST
ಮೈಸೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಗ್ರಾಹಕರೊಬ್ಬರಿಗೆ ಇ–ಖಾತೆ ವಿತರಿಸಿದರು
ಮೈಸೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಗ್ರಾಹಕರೊಬ್ಬರಿಗೆ ಇ–ಖಾತೆ ವಿತರಿಸಿದರು   

ಮೈಸೂರು: ಇಲ್ಲಿನ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 50,022 ಆಸ್ತಿಗಳಿಗೆ ಇ–ಖಾತೆ ವಿತರಿಸುವ ಮೂಲಕ ಮೈಸೂರು ಜಿಲ್ಲೆಯು ಇ–ಆಸ್ತಿ ವಿತರಣೆಯಲ್ಲಿ ಅಗ್ರ ಸ್ಥಾನ ಪಡೆದಿದೆ.

ಸರ್ಕಾರವು ಇ–ಖಾತೆ ಅಭಿಯಾನಕ್ಕೆ ಚಾಲನೆ ನೀಡಿದಾಗಿನಿಂದ ಆ.22ರವರೆಗೆ ರಾಜ್ಯದಲ್ಲಿ ಒಟ್ಟು 3,48,186 ‘ಎ’ ರಿಜಿಸ್ಟರ್ ಹಾಗೂ 2,62,391 ಆಸ್ತಿಗಳಿಗೆ ‘ಬಿ’ ರಿಜಿಸ್ಟರ್‌ ಖಾತೆಗಳನ್ನು ವಿತರಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ 34,130 ಆಸ್ತಿಗಳಿಗೆ ‘ಎ’ ಹಾಗೂ 15,892 ಆಸ್ತಿಗಳಿಗೆ ‘ಬಿ’ ಖಾತೆ ವಿತರಣೆ ಆಗಿದೆ. ಬೆಳಗಾವಿ ಜಿಲ್ಲೆಯು ಎರಡನೇ ಸ್ಥಾನದಲ್ಲಿದ್ದು, 48,897 ಖಾತೆಗಳನ್ನು ವಿತರಿಸಿದೆ. ವಿಜಯಪುರ ಜಿಲ್ಲೆಯು ಮೂರನೇ ಸ್ಥಾನದಲ್ಲಿದ್ದು, 40,666 ಇ–ಖಾತೆ ವಿತರಣೆ ಆಗಿದೆ.

ADVERTISEMENT

ಚಾಮರಾಜನಗರ ಜಿಲ್ಲೆಯು ಕಡೆಯ ಸ್ಥಾನ ಪಡೆದಿದ್ದು, ಇಲ್ಲಿ 2519 ಇ–ಖಾತೆ ವಿತರಣೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.