ADVERTISEMENT

ಜಾನಪದ ಗೀತೆ, ಲಾವಣಿ ದಾಖಲಿಸಿ: ಸಂತೋಷ್ ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 5:22 IST
Last Updated 10 ಸೆಪ್ಟೆಂಬರ್ 2023, 5:22 IST
ಹುಣಸೂರು ತಾಲ್ಲೂಕಿನ ಹಗರನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಂತೋಷ್ ಕುಮಾರ್ ಉದ್ಘಾಟಿಸಿದರು. ಸಿದ್ದಮ್ಮ, ವೆಂಕಟಾಚಾರಿ ಇದ್ದರು
ಹುಣಸೂರು ತಾಲ್ಲೂಕಿನ ಹಗರನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಂತೋಷ್ ಕುಮಾರ್ ಉದ್ಘಾಟಿಸಿದರು. ಸಿದ್ದಮ್ಮ, ವೆಂಕಟಾಚಾರಿ ಇದ್ದರು   

ಹುಣಸೂರು: ‘ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಸಂತೋಷ್ ಕುಮಾರ್ ಹೇಳಿದರು.

ತಾಲ್ಲೂಕಿನ ಹಗರನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಜಾನಪದ ಸೊಗಡಿನ ಕಲೆಯನ್ನು ಮೈಗೂಡಿಸಿಕೊಂಡ ಪ್ರತಿಭೆಗಳಿದ್ದು, ಅವರನ್ನು ಶಿಕ್ಷಕರು ಗುರುತಿಸಬೇಕು. ಇತ್ತೀಚಿನ ದಿನದಲ್ಲಿ ಜಾನಪದ ನೃತ್ಯ, ಲಾವಣಿ ಕಣ್ಮರೆಯಾಗುತ್ತಿವೆ. ರೈತರು ಬೇಸಾಯದ ಸಮಯದಲ್ಲಿ ಹೊಲ ಗದ್ದೆಗಳಲ್ಲಿ ಹಾಡುವ ಪದಗಳು ಅಲಿಖಿತವಾಗಿದ್ದು, ಅವುಗಳನ್ನು ದಾಖಲಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಮದೂರು ಗ್ರಾ.ಪಂ. ಅಧ್ಯಕ್ಷೆ ಸಿದ್ದಮ್ಮ,, ಉಪಾಧ್ಯಕ್ಷ ವೆಂಕಟಾಚಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿಕ್ಕೇಗೌಡ, ಮುಖ್ಯಶಿಕ್ಷಕ ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.