ADVERTISEMENT

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬುನಾದಿ: ಎಂ.ಪಿ.ನಾಗಮ್ಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:44 IST
Last Updated 10 ಫೆಬ್ರುವರಿ 2026, 5:44 IST
ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎನ್‌ಎಸ್‌ಎಸ್‌, ಕ್ರೀಡೆ, ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕಿ ಹಾಗೂ ಕಾಲೇಜಿನ ಉಪನ್ಯಾಸಕರಾಗಿದ್ದ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು
ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎನ್‌ಎಸ್‌ಎಸ್‌, ಕ್ರೀಡೆ, ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕಿ ಹಾಗೂ ಕಾಲೇಜಿನ ಉಪನ್ಯಾಸಕರಾಗಿದ್ದ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು   

ಹುಣಸೂರು: ‘ಶಾಲೆ ಉತ್ತಮ ಪ್ರಜೆ ರೂಪಿಸುವ ಕೇಂದ್ರವಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಭದ್ರ ಬುನಾದಿ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಹೇಳಿದರು.

ತಾಲ್ಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್‌ ಚಟುವಟಿಕೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯೆ ಪ್ರತಿ ವ್ಯಕ್ತಿಯನ್ನು ಪರಿಪೂರ್ಣವಾಗಿ ರೂಪಿಸುವ ಸಾಧನವಾಗಿದೆ. ವಿದ್ಯೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಹಾದಿಯಾಗಿದ್ದು, ಅಕ್ಷರ ಕಲಿತ ವ್ಯಕ್ತಿ ಸಾಮಾಜಿಕವಾಗಿ ಹೇಗೆ ನಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ಹೊಂದಿರುವರು. ಅಕ್ಷರ ಜ್ಞಾನ ಇಲ್ಲದ ವ್ಯಕ್ತಿ ಆತನ ಮನಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುವ ಪ್ರವೃತಿ ಇರಲಿದೆ. ಈ ಎರಡರ ನಡುವೆ ಹಲವು ವ್ಯತ್ಯಾಸವಿದ್ದು, ಶಿಕ್ಷಣದಿಂದ ಗುಣಾತ್ಮಕ ವ್ಯಕ್ತಿಯಾಗಿ ಪರಿಪೂರ್ಣತೆ ಹೊಂದಲು ಸಾಧ್ಯ ಎಂದರು.

ADVERTISEMENT

ಕರಿಮುದ್ದನಹಳ್ಳಿ ಶಾಲೆ ತಮ್ಮ ಜೀವನದಲ್ಲಿ ವಿಶೇಷವಾಗಿದ್ದು, ವೃತ್ತಿ ಜೀವನ ಈ ಶಾಲೆಯಲ್ಲಿ ಆರಂಭಿಸಿ ಹಲವು ಗ್ರಾಮೀಣ ವಿದ್ಯಾರ್ಥಿಗಳನ್ನು ಉತ್ತಮ ಸ್ಥಾನಕ್ಕೆ ತರುವಲ್ಲಿ ಶ್ರಮಿಸಿದ ದಿನಗಳನ್ನು ಸ್ಮರಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕಾಲೇಜು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಕೆಂಡಗಣ್ಣ, ಪ್ರಾಂಶುಪಾಲ ಈಶ್ವರಪ್ಪ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಕೆಂಡಗಣ್ಣೇಗೌಡ, ಎನ್.ಮಂಜು, ಆನಂದಮೂರ್ತಿ, ಶ್ರೀನಿವಾಸ್‌, ಮಹದೇವ್‌, ರಂಗನಾಥ್‌, ಮಹದೇವಶೆಟ್ಟಿ, ಸ್ವಾತಿಕುಮಾರಿ, ವಿನೋದಾ, ಮಾಲತಿ ರಾಜೇಶ್ವರಿ, ಸಪ್ನಾ ಉನ್ನಿಪ್ರಸಾದ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.