ಮೈಸೂರು: ‘ಭವಿಷ್ಯದ ಉಸಿರು ಪರಿಸರದ ಅಸ್ತಿತ್ವದಲ್ಲಿದೆ. ಈ ವಾಸ್ತವ ಪರಿಸ್ಥಿತಿ ಮಕ್ಕಳಿಗೆ ಮನನ ಮಾಡಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಪ್ರಮುಖ’ ಎಂದು ಪರಿಸರ ತಜ್ಞೆ ರೇಖಾ ರೋಹಿತ್ ಹೇಳಿದರು.
ನಗರದ ಆರ್.ಟಿ.ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಕ್ಯಾಂಪಸ್‌ನಲ್ಲಿ ಈಚೆಗೆ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪರಿಸರಕ್ಕೆ ಮನುಷ್ಯರೇ ಕಂಟಕಪ್ರಾಯವಾಗಿದ್ದಾರೆ. ಇದು ವಿಪರ್ಯಾಸದ ಸಂಗತಿ. ತ್ಯಾಜ್ಯ ನಿರ್ವಹಣೆಯ ನಮ್ಮ ಬೇಜವಾಬ್ದಾರಿತನ ಪರಿಸರಕ್ಕೆ ಮಾರಕವಾಗುತ್ತಿದೆ’ ಎಂದರು.
ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳು ಆರ್.ಟಿ.ನಗರ ಬಡಾವಣೆಯಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿದರು.
ಪ್ರಾಂಶುಪಾಲ ಮಹೇಂದ್ರ ಎಂ.ಎನ್., ಉಪಪ್ರಾಂಶುಪಾಲರಾದ ಶಾಲಿನಿ ಮಾಜೋ, ಶೀನಾ ಗುರ್ನಾನಿ, ಪ್ರೀತಿ ಕಮಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.