ADVERTISEMENT

ಅಬಕಾರಿ ಇಲಾಖೆ: ವಶಗೊಂಡಿದ್ದ ವಾಹನಗಳ ಹರಾಜು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:54 IST
Last Updated 28 ಏಪ್ರಿಲ್ 2025, 13:54 IST
ತಿ.ನರಸೀಪುರ ಪಟ್ಟಣದ ಅಬಕಾರಿ ವಲಯ ಕಚೇರಿಯಲ್ಲಿ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ಜರುಗಿತು
ತಿ.ನರಸೀಪುರ ಪಟ್ಟಣದ ಅಬಕಾರಿ ವಲಯ ಕಚೇರಿಯಲ್ಲಿ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ಜರುಗಿತು   

ತಿ. ನರಸೀಪುರ: ಅಬಕಾರಿ ಇಲಾಖೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಹರಾಜು ಪ್ರಕ್ರಿಯೆ ಪಟ್ಟಣದ ಅಬಕಾರಿ ವಲಯ ಕಚೇರಿಯಲ್ಲಿ ಸೋಮವಾರ ನಡೆಯಿತು.

ವಲಯ ಕಚೇರಿ ಆವರಣದಲ್ಲಿ ಅಬಕಾರಿ ಉಪ ಅಧೀಕ್ಷಕ ಎಂ.ಎನ್ ನಟರಾಜು ಅವರ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 10 ವಾಹನಗಳು ಹರಾಜಾದವು.

ಈ ಪ್ರಕ್ರಿಯೆಯಲ್ಲಿ ತಾಲ್ಲೂಕು ವಲಯ ಅಬಕಾರಿ ನಿರೀಕ್ಷಕ ಸುಧಾರಾಣಿ ಎ, ಸಿಬ್ಬಂದಿ ಶಿವಪ್ರಕಾಶ್. ಬಿ.ಪಿ, ಪರಶಿವಮೂರ್ತಿ, ಮಹಾಲಿಂಗಪ್ಪ ಮತ್ತು ಸಂತೋಷ್ ನಾಯಕ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.