ತಿ. ನರಸೀಪುರ: ತಾಲ್ಲೂಕಿನ ಸೋಸಲೆ ಹೋಬಳಿಯ ಚಿದರವಳ್ಳಿ ಗ್ರಾಮದ ವಡ್ಗಲ್ ರಂಗಸ್ವಾಮಿ ಟ್ರೇಡರ್ಸ್ ಮಳಿಗೆಯ ಚಿಲ್ಲರೆ ಗೊಬ್ಬರ ಮಾರಾಟ ಪರವಾನಗಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ರದ್ದು ಪಡಿಸಿದ್ದಾರೆ.
‘ಕೆಲವೇ ಮಂದಿ ರೈತರಿಗೆ ಹೆಚ್ಚಿನ ಪ್ರಮಾಣದ ಯೂರಿಯಾ ರಸಗೊಬ್ಬರ ವಿತರಿಸಿರುವುದನ್ನು ಪರಿಶೀಲನೆ ವೇಳೆ ಪತ್ತೆ ಹಚ್ಚಿದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಉತ್ತರ ನೀಡದಿರುವುದರಿಂದ ನಿಯಮ ಉಲ್ಲಂಘನೆ ಅನ್ವಯ ಪರವಾನಗಿ ರದ್ದು ಪಡಿಸಲಾಗಿದೆ’ ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್. ಸುಹಾಸಿನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.