ADVERTISEMENT

ಆಲಗೂಡು: ಆರಂಭಗೊಂಡ ಪ್ರತಿಷ್ಟಾಪನಾ ಕುಂಭಾಭಿಷೇಕ ಉತ್ಸವ 

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 6:07 IST
Last Updated 26 ನವೆಂಬರ್ 2020, 6:07 IST
ತಿ.ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ೨ ಕೋಟಿ ರೂ.ಗಳ ವೆಚ್ಚದಲ್ಲಿ ಜೀರ್ಣೋದ್ಧಾರ ಗೊಂಡಿರುವ  ಶ್ರೀ ಸಿದ್ದೇಶ್ವರ ದೇವಸ್ಥಾನ ಪ್ರತಿಷ್ಠಾಪನಾ ಕುಂಭಾಭಿಷೇಕದ ಉತ್ಸವದಂಗವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು 
ತಿ.ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ೨ ಕೋಟಿ ರೂ.ಗಳ ವೆಚ್ಚದಲ್ಲಿ ಜೀರ್ಣೋದ್ಧಾರ ಗೊಂಡಿರುವ  ಶ್ರೀ ಸಿದ್ದೇಶ್ವರ ದೇವಸ್ಥಾನ ಪ್ರತಿಷ್ಠಾಪನಾ ಕುಂಭಾಭಿಷೇಕದ ಉತ್ಸವದಂಗವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು    

ತಿ.ನರಸೀಪುರ : ಪಟ್ಟಣಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಮೂರು ದಿನಗಳ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮಗಳು ಬುಧವಾರದಿಂದ ಆರಂಭಗೊಂಡಿದ್ದು, ನ.27 ರ ವರೆಗೆ ನಡೆಯಲಿದೆ.

ಪುರಸಭಾ ವ್ಯಾಪ್ತಿಯ ಆಲಗೂಡು ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯ ಪುರಾತನ ದೇವಾಲಯ. ಶಿಥಿಲವಾಗಿದ್ದ ದೇಗುಲವನ್ನು ಗ್ರಾಮಸ್ಥರು ಹಾಗು ಭಕ್ತಾಧಿಗಳ ದೇಣಿಗೆ ನೆರವಿನಿಂದ ೨ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಬುಧವಾರ ಸಂಜೆ ೪ ಗಂಟೆಗೆ ಮೂಲ ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಹೋಮ, ಪುಣ್ಯಾಹ, ಯತ್ವಿ ಸ್ವರಣ, ಪ್ರವೇಶ ಬಲಿ, ರಾಕ್ಷೋಘ್ನ ಹೋಮ ಹಾಗೂ ವಾಸ್ತು ಹೋಮ ಕಾರ್ಯಕ್ರಮ, ನಡೆಯಿತು.

ADVERTISEMENT

ನ.26ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಪುಣ್ಯಾಹ, ನೇತ್ರೋನ್ಮಿಲನ, ಬಿಂಬ ಶುದ್ಧಿ, ಜಲಾಧಿವಾಸ,ಕಳಸ ಪ್ರತಿಷ್ಠಾಪನಾ ಪೂಜೆ, ಅಗ್ನಿ ಪ್ರತಿಷ್ಠಾಪನಾ, ಮೂಲ ಮಂತ್ರ ಹೋಮ,ಅಧಿವಾಸಹೋಮ,ಮಹಾ ಮಂಗಳಾರತಿ, ಸಂಜೆ ೬ ಗಂಟೆಗೆ ಧಾನ್ಯದಿವಾಸ,ಪ್ರತಿಷ್ಠಾ ಹೋಮ, ಶಯ್ಯಾಧಿವಾಸ, ಸ್ಪರ್ಶಹೋಮ, ಯಂತ್ರಸ್ಥಾಪನೆಪೂರ್ವಕ,ಅಷ್ಠಬಂಧನ ಸಮರ್ಪಣೆ ಹಾಗು ಮಹಾಮಂಗಳಾರತಿ ಜರುಗಲಿದೆ

ನ.27ರ ಶುಕ್ರವಾರ ಪುಣ್ಯಾರ್ಹ,ಕಳಸಾರ್ಚನೆ,ಪ್ರಾಣ ಪ್ರತಿಷ್ಠಾ, ತತ್ವನ್ಯಾಸ, ಕಳಾನ್ಯಾಸ,ಕಳಾಹೋಮ, ಪೂರ್ಣಾಹುತಿ ಅಭಿಜನ್ ಮುಹೂರ್ತದಲ್ಲಿ ಕುಂಭಾಭಿಷೇಕ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಆದಿ ಚುಂಚನಗಿರಿ ಶಾಖಾ ಮಠದ ಸೋಮನಾಥಸ್ವಾಮೀಜಿ, ವಾಟಾಳು ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ಮಾಜಿ ಸಿಎಂ ಸಿದ್ದರಾಮಯ್ಯ ದೇಗುಲ ಉದ್ಘಾಟಿಸಲಿದ್ದು, ಶಾಸಕ ಯತೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ುಉತ್ಸವದ ಻ಂಗವಾಗಿ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಬಹಳ ಐತಿಹಾಸಿಕ ಹಿನ್ನೆಲೆ ಇರುವ ಆಲಗೂಡು, ಬನ್ನೂರು ಯಾಚೇನಹಳ್ಳಿ, ತುರಗನೂರು, ಚಾಮನಹಳ್ಳಿ, ಬೀಡನಹಳ್ಳಿ, ಮಾರಗೌಡನಹಳ್ಳಿ, ಸೀಹಳ್ಳಿ, ಕೇತಹಳ್ಳಿ, ಸತ್ತೇಗಾಲ, ಹಂಗರಹಳ್ಳಿ, ಮೈಸೂರು, ರಾಮಸಮುದ್ರ, ನಂಜನಗೂಡು, ನೇರಲೆಕೆರೆ, ಕೊಡಿಯಾಲ, ಕೀಲಾರ, ಬೆಂಗಳೂರು, ದ್ಯಾವರಸನಹಳ್ಳಿ, ಕೊಳ್ಳೇಗಾಲ, ಕಂದೇಗಾಲ ಲಲಿತಾದ್ರಿಪುರ, ಅಗ್ರಹಾರ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಮನೆ ದೇವರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.