ADVERTISEMENT

ಸಾ.ರಾ.ಮಹೇಶ್ ವಿರುದ್ಧ ಎಫ್‌ಐಆರ್; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 20:29 IST
Last Updated 30 ಏಪ್ರಿಲ್ 2022, 20:29 IST

ಮೈಸೂರು: ಶಾಸಕ ಸಾ.ರಾ.ಮಹೇಶ್ ಅವರ ಪ್ರಚೋದನೆಯಿಂದ ಅವರ ಸಹಚರ ರಘು ಹಾಗೂ ಇತರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು ಇಲ್ಲಿನ ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್‌ 1860 (504, 506, 35) ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಅದರಲ್ಲಿ ರಘು ಹಾಗೂ ಸಾ.ರಾ.ಮಹೇಶ್ ಅವರನ್ನು ಆರೋಪಿಯನ್ನಾಗಿಸಿದ್ದಾರೆ.

ಇದರಿಂದ ಕೆರಳಿದ ಸಾ.ರಾ.ಮಹೇಶ್ ಪೊಲೀಸ್ ಠಾಣೆಯ ಮುಂದೆ ಶನಿವಾರ ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು. ಇದಕ್ಕೆ ಅವರ ಬೆಂಬಲಿಗರೂ ಸಾಥ್ ನೀಡಿದರು. ಸುರಿಯುತ್ತಿದ್ದ ಮಳೆಯ ನಡುವೆಯೂ ಅವರು ಪ್ರತಿಭಟನೆ ಮುಂದುವರಿಸಿದರು.

ADVERTISEMENT

ಸ್ಥಳಕ್ಕೆ ಬಂದ ಡಿಸಿಪಿ ಪ್ರದೀಪ್‌ ಗುಂಟಿ ಪ್ರತಿಭಟನಕಾರರನ್ನು ಮನವೊಲಿಸಲು ತಡರಾತ್ರಿಯವರೆಗೂ ಪ್ರಯತ್ನ ಮುಂದುವರಿಸಿದ್ದರು.

ಏನಿದು ಘಟನೆ?: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾ.ರಾ.ಮಹೇಶ್ ಬೆಂಬಲಿಗ ರಘು ಹಾಗೂ ಇತರರು ಶುಕ್ರವಾರ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಯಾವಾಗಲೂ ಮುಡಾದಲ್ಲೇ ಇರುತ್ತೀಯಾ, ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದರು. ಮತ್ತೆ ಮತ್ತೆ ಹಿಂಬಾಲಿಸಿ ಹಲ್ಲೆಗೆ ಮುಂದಾದರು. ಇದಕ್ಕೆ ಸಾ.ರಾ.ಮಹೇಶ್ ಅವರ ಕುಮ್ಮಕ್ಕು ಕಾರಣ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.