ADVERTISEMENT

ಫಲಪುಷ್ಪ ಪ್ರದರ್ಶನ: ಬಹುಮಾನಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 15:40 IST
Last Updated 21 ಅಕ್ಟೋಬರ್ 2018, 15:40 IST
ಫಲ‍‍ಪುಷ್ಪ ಪ್ರದರ್ಶನದಲ್ಲಿ ಕೈಗಾರಿಕಾ ಸಂಸ್ಥೆಗಳ ತೋಟಗಳ ವಿಭಾಗದಲ್ಲಿ ಮೊದಲ ಬಹುಮಾನ ಗಳಿಸಿದ ಬಿಇಎಂಎಲ್‌ ಸಿಬ್ಬಂದಿ ಟ್ರೋಫಿ ಸ್ವೀಕಿರಿಸಿದರು
ಫಲ‍‍ಪುಷ್ಪ ಪ್ರದರ್ಶನದಲ್ಲಿ ಕೈಗಾರಿಕಾ ಸಂಸ್ಥೆಗಳ ತೋಟಗಳ ವಿಭಾಗದಲ್ಲಿ ಮೊದಲ ಬಹುಮಾನ ಗಳಿಸಿದ ಬಿಇಎಂಎಲ್‌ ಸಿಬ್ಬಂದಿ ಟ್ರೋಫಿ ಸ್ವೀಕಿರಿಸಿದರು   

ಮೈಸೂರು: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ತೋಟಗಾರಿಕಾ ಸಂಘವು ಹಮ್ಮಿಕೊಂಡಿದ್ದ 12 ದಿನಗಳ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದವರಿಗೆ ಬಹುಮಾನ ವಿತರಿಸಲಾಯಿತು.

ಕೈಗಾರಿಕಾ ಸಂಸ್ಥೆಗಳ ತೋಟಗಳ ಪೈಕಿ ಬೆಳವಾಡಿಯ ಬಿಇಎಂಎಲ್‌, ಮೇಟಗಳ್ಳಿಯ ಜೆ.ಕೆ.ಟೈರ್ಸ್‌, ಇನ್ಫೊಸಿಸ್ (ಬಹುಮಾನಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ), ಸರ್ಕಾರಿ ಮತ್ತು ಆಡಳಿತಾಧಿಕಾರಿಗಳ ಕಚೇರಿ ತೋಟಗಳ ಪೈಕಿ ಮೈಸೂರು ಅರಮನೆ ಮಂಡಳಿ, ಅಬ್ದುಲ್‌ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪವರ್‌ ಗ್ರಿಡ್ ಕಾರ್ಪೊರೇಷನ್ ಆಫ್‌ ಇಂಡಿಯಾ, ಶಿಕ್ಷಣ ಸಂಸ್ಥೆಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಬನ್ನಿಮಂಟಪ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಅಪಾರ್ಟ್‌ಮೆಂಟ್, ಹೋಟೆಲ್, ಆಸ್ಪತ್ರೆ ತೋಟಗಳ ಪೈಕಿ ಜೆಎಸ್‌ಎಸ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಸೈಲೆಂಟ್‌ ಶೋರ್ಸ್ ರೆಸಾರ್ಟ್ಸ್, ಜುವಾರಿ ಗಾರ್ಡನ್ ಸಿಟಿ, ಖಾಸಗಿ ಮನೆಗಳ ತೋಟಗಳ ಪೈಕಿ ಸಿದ್ದಾರ್ಥನಗರದ ಡಾ.ಹೇಮಮಾಲಿನಿ ಲಕ್ಷ್ಮಣ್, ಜಯಲಕ್ಷ್ಮಿಪುರಂನ ಅಲಿ ವಾಘ್‌, ವಿಜಯನಗರ 3ನೇ ಹಂತದ ಪ್ರೊ.ಎಂ.ರುದ್ರಾರಾಧ್ಯ, ವಿಜಯನಗರ 1ನೇ ಹಂತದ ಪ್ರಭಾ ಸುಬ್ರಹ್ಮಣ್ಯ ಅವರಿಗೆ ಬಹುಮಾನಗಳನ್ನು ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ಬಹುಮಾನ ವಿತರಿಸಿದರು. ನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ನಗರಪಾಲಿಕೆ ಸದಸ್ಯ ಎಂ.ಸತೀಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್‌.ಎಂ.ನಾಗರಾಜು, ಉಪನಿರ್ದೇಶಕ ಡಿ.ಮಂಜುನಾಥ್, ತೋಟಗಾರಿಕಾ ಸಂಘದ ಉಪಾಧ್ಯಕ್ಷ ಡಿ.ಪ್ರಭಾಮಂಡಲ್, ಜಂಟಿ ಕಾರ್ಯದರ್ಶಿ ಎಚ್‌.ಹನುಮಯ್ಯ, ಖಜಾಂಚಿ ಎಂ.ವಿಜಯಕುಮಾರಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.