ADVERTISEMENT

ಮೈಸೂರು: ಸಗಟು ಮಳಿಗೆಗೆ ಸಚಿವರ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:09 IST
Last Updated 20 ಜುಲೈ 2025, 3:09 IST
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಬಂಡೀಪಾಳ್ಯದ ಸಗಟು ಮಳಿಗೆಗೆ ಶನಿವಾರ ಭೇಟಿ ನೀಡಿ ರಾಗಿಯ ಗುಣಮಟ್ಟವನ್ನು ಪರಿಶೀಲಿಸಿದರು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಬಂಡೀಪಾಳ್ಯದ ಸಗಟು ಮಳಿಗೆಗೆ ಶನಿವಾರ ಭೇಟಿ ನೀಡಿ ರಾಗಿಯ ಗುಣಮಟ್ಟವನ್ನು ಪರಿಶೀಲಿಸಿದರು   

ಮೈಸೂರು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಇಲ್ಲಿನ ಬಂಡೀಪಾಳ್ಯದ ಸಗಟು ಮಳಿಗೆಗೆ ಶನಿವಾರ ಭೇಟಿ ನೀಡಿ, ಆಹಾರ ಧಾನ್ಯಗಳನ್ನು ಪರಿಶೀಲಿಸಿದರು.

ಅಕ್ಕಿ, ರಾಗಿಯ ಗುಣಮಟ್ಟ ಪರಿಶೀಲಿಸಿ, ‘ಉತ್ತಮವಾದ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಸಗಟು ಮಳಿಗೆಗಳಲ್ಲಿ ಗುಣಮಟ್ಟವನ್ನು ಕಾಪಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಮಾಲಿ ಕೆಲಸಗಾರರನ್ನು ಮಾತನಾಡಿಸಿದ ಅವರು, ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಲಾಗುವುದು ಎಂದರು.

ADVERTISEMENT

ಇಲಾಖೆಯ ಉಪ ನಿರ್ದೇಶಕ ಮಂಟೇಸ್ವಾಮಿ, ಸಗಟು‌ ಮಳಿಗೆಯ ಸಹಾಯಕ ನಿರ್ದೇಶಕ ಕಿರಣ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.