ADVERTISEMENT

ಮೈಸೂರು: ಆರ್‌ಎಫ್‌ಒ ಕಾಂತರಾಜ್‌ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 10:25 IST
Last Updated 19 ಜನವರಿ 2026, 10:25 IST
   

ಮೈಸೂರು: ಇಲ್ಲಿನ ಸಬ್‌ ಅರ್ಬನ್ ಬಸ್ ನಿಲ್ದಾಣದ ಸಮೀಪದ ಮದರ್ ತೆರೆಸಾ ರಸ್ತೆಯಲ್ಲಿನ (ಬಿ.ಎನ್.ರೋಡ್) ಖಾಸಗಿ ಲಾಡ್ಜ್ ಹಿಂಭಾಗದ ಕಾರಿಡಾರ್‌ನಲ್ಲಿ ತಿ.ನರಸೀಪುರದ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ ಕಾಂತರಾಜ್‌ ಚೌಹಾಣ್‌ ಶವ ಪತ್ತೆಯಾಗಿದೆ.

ಕಾಂತರಾಜ್‌ ಚೌಹಾಣ್‌ ಹದಿನೈದು ದಿನಗಳ ಹಿಂದೆ ತಿ.ನರಸೀಪುರಕ್ಕೆ ವರ್ಗಾವಣೆಗೊಂಡಿದ್ದರು. ಭಾನುವಾರ ಸ್ನೇಹಿತ ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಜೊತೆ ಹೋಟೆಲ್‌ಗೆ ಬಂದಿದ್ದರು. ‘ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಮಲ್ಲನಗೌಡ ಪಾಟೀಲ್‌ ಸ್ಥಳದಲ್ಲಿ ಇಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಲಷ್ಕರ್‌ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT