ADVERTISEMENT

ಸಂಘದ ನಿರ್ಣಯಕ್ಕೆ ವಿರೋಧ; ವಕಾಲತು ವಹಿಸಲು ವಕೀಲರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 9:00 IST
Last Updated 20 ಜನವರಿ 2020, 9:00 IST

ಮೈಸೂರು: ದೇಶದ್ರೋಹ ಪ್ರಕರಣಗಳಲ್ಲಿ ವಕಾಲತು ವಹಿಸಬಾರದು ಎಂಬ ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆಯ ತೀರ್ಮಾನಕ್ಕೆ ಕೆಲವು ಸದಸ್ಯರು ಸೋಮವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಆರೋಪಿಗಳ ಪರ ವಕಾಲತು ವಹಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಘದ ಸದಸ್ಯರಾದ ಮಂಜುಳಾ ಮಾನಸ, ‘ಇದೊಂದು ತಪ್ಪು ನಿರ್ಧಾರ. ಸಭೆಯಲ್ಲಿ ನಮಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಡಲಿಲ್ಲ. ಆರಂಭದಲ್ಲೇ ಗಲಾಟೆ ಆರಂಭವಾಯಿತು. ಹೀಗಾಗಿ, ನಾವು ಒಟ್ಟು 150 ಮಂದಿ ವಕೀಲರು ಆರೋಪಿಗಳ ಪರವಾಗಿ ವಕಾಲತು ವಹಿಸಲು ಅರ್ಜಿ ಸಲ್ಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT