ADVERTISEMENT

‘ಪ್ರಜಾವಾಣಿ’-‘ಡೆಕ್ಕನ್ ಹೆರಾಲ್ಡ್‌’ ಸಹಯೋಗ: ‘ಸ್ವಾತಂತ್ರ್ಯದ ಓಟ–75’ ನಾಳೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:06 IST
Last Updated 13 ಆಗಸ್ಟ್ 2022, 16:06 IST

ಮೈಸೂರು: ಮೈಸೂರು ಅಥ್ಲೆಟಿಕ್ಸ್‌ ಕ್ಲಬ್‌, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಸಹಯೋಗದಲ್ಲಿ ಆ.14ರ ಭಾನುವಾರ ಬೆಳಿಗ್ಗೆ 7ಕ್ಕೆ ಮೈಸೂರು ವಿಶ್ವವಿದ್ಯಾಲಯದ ಓವಲ್‌ ಮೈದಾನದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ‘ಸ್ವಾತಂತ್ರ್ಯದ ಓಟ–75’ ಆಯೋಜಿಸಲಾಗಿದೆ.

ಡಿಸಿಪಿ ಪ್ರದೀಪ್ ಗುಂಟಿ ಉದ್ಘಾಟಿಸಲಿದ್ದಾರೆ. ಮೈಸೂರು ಅಥ್ಲೆಟಿಕ್ಸ್‌ ಕ್ಲಬ್ ಅಧ್ಯಕ್ಷ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ.

ಬಹುಮಾನ ವಿತರಣೆ ಕಾರ್ಯಕ್ರಮವು ಬೆಳಿಗ್ಗೆ 9.15ಕ್ಕೆ ನಡೆಯಲಿದ್ದು, ಡಿಸಿಪಿ ಗೀತಾ ಪ್ರಸನ್ನ ಮತ್ತು ದಿ ಎಸ್ಟೇಟ್, ಯಂಗ್‌ ಐಸ್‌ಲ್ಯಾಂಡ್ ಹಾಗೂ ರೆಸಾರ್ಟ್‌ ಮಾಲೀಕ ಡಾ.ಎಂ.ಮಹೇಶ್‌ ಶೆಣೈ ಉಪಸ್ಥಿತರಿರಲಿದ್ದಾರೆ. ಅಂತರರಾಷ್ಟ್ರೀಯ ಕ್ರೀಡಾಪಟು ಆರ್ಯನ್ ಪ್ರಜ್ವಲ್ ಕಶ್ಯಪ್ ಅವರನ್ನು ಸನ್ಮಾನಿಸಲಾಗುವುದು.

ADVERTISEMENT

ಮೂರು ವಿಭಾಗಗಳಲ್ಲಿ (ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ–ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ) ಓಟದ ಸ್ಪರ್ಧೆ ನಡೆಯಲಿದೆ. ಬಾಲಕಿಯರಿಗೆ 3 ಕಿ.ಮೀ., ಬಾಲಕರಿಗೆ 5 ಕಿ.ಮೀ. ಓಟ ನಿಗದಿಪಡಿಸಲಾಗಿದೆ.

ಮೂರೂ ವಿಭಾಗಗಳಲ್ಲೂ ಮೊದಲ ಬಹುಮಾನ ₹ 1,000, ದ್ವಿತೀಯ ಬಹುಮಾನ ₹ 750 ಹಾಗೂ ತೃತೀಯ ಬಹುಮಾನ ₹ 500 ಜೊತೆಗೆ ಪದಕ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಓಟ ಪೂರ್ಣಗೊಳಿಸುವ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು. ಉಚಿತ ಪ್ರವೇಶವಿದೆ.

ಮಾಹಿತಿಗೆ 9448046667 (ಯೋಗೇಂದ್ರ), 9845231243 (ಮುರಳೀಧರ್‌), 9751971978 (ಜಿ.ಪ್ರಭಾಕರ್) ಸಂರ್ಕಿಸಬಹುದು ಎಂದು ಕ್ಲಬ್‌ ಕಾರ್ಯದರ್ಶಿ ಎಂ.ಯೋಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.