ADVERTISEMENT

ಮೈಸೂರು: ಪಿತ್ತಕೋಶದಲ್ಲಿ 500ಕ್ಕೂ ಹೆಚ್ಚು ಕಲ್ಲು!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 14:30 IST
Last Updated 6 ಸೆಪ್ಟೆಂಬರ್ 2022, 14:30 IST
ಶಸ್ತ್ರಚಿಕಿತ್ಸೆಯಲ್ಲಿ ದೊರೆತ ಕಲ್ಲುಗಳು
ಶಸ್ತ್ರಚಿಕಿತ್ಸೆಯಲ್ಲಿ ದೊರೆತ ಕಲ್ಲುಗಳು   

ಮೈಸೂರು: ನಗರದ ನಯನಕುಮಾರ್ಸ್‌ ಆಸ್ಪತ್ರೆಯ ಮೆಡಿಕಲ್‌ ಸೂಪರಿಟೆಂಡೆಂಟ್ ಡಾ.ಅಲಿ ಇತ್ತೀಚೆಗೆ ನಡೆಸಿದ ಲ್ಯಾಪರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯರೊಬ್ಬರ ಪಿತ್ತಕೋಶದಲ್ಲಿ 500ಕ್ಕೂ ಹೆಚ್ಚಿನ ಸಣ್ಣಸಣ್ಣ ಕಲ್ಲುಗಳು ಪತ್ತೆಯಾಗಿವೆ.

ಸತತ ಐದೂವರೆ ತಾಸುಗಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

‘ಆಸ್ಪತ್ರೆ ಪ್ರಾರಂಭವಾದ ಕೆಲವೇ ತಿಂಗಳಲ್ಲಿ ಅತಿ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಪರೂಪದ ಚಿಕಿತ್ಸೆ ನೀಡುತ್ತಿದೆ.ಅವುಗಳಲ್ಲಿ ಡಾ.ಅಲಿ ನಡೆಸಿದ ಪಿತ್ತಕೋಶ ಸರ್ಜರಿ ಪ್ರಮುಖವಾದದ್ದು. 55ವರ್ಷದ ಮಹಿಳೆ ಹೊಟ್ಟೆ ನೋವು ತಾಳಲಾರದೆ ಹಲವು ಆಸ್ಪತ್ರೆಗಳನ್ನು ಸುತ್ತಿದ್ದರು.ಯಾವ ಆಸತ್ರೆಯಲ್ಲೂ ಸರ್ಜರಿಗೆ ಶಿಫಾರಸು ಮಾಡಿರಲಿಲ್ಲ.ಬಳಿಕನಯನಕುಮಾರ್ಸ್‌ ಆಸತ್ರೆಗೆ ಬಂದ ಆ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಆಸ್ಪತ್ರೆ ತಿಳಿಸಿದೆ.

ADVERTISEMENT

‘ಹೆಚ್ಚು ಕಲ್ಲುಗಳು ತುಂಬಿದ್ದರಿಂದ ಪಿತ್ತಕೋಶ ದೊಡ್ಡದಾಗಿತ್ತು. ಅದನ್ನು ತೆರೆದ ಶಸ್ತ್ರಚಿಕಿತ್ಸೆಯಿಂದಲೇ ತೆಗೆಯಬೇಕಿತ್ತು.ಆದರೆ,ಹೆಚ್ಚಿನ ಗಾಯವಾಗದ ಲ್ಯಾಪರೋಸ್ಕೋಪಿಕ್‌ ವಿಧಾನ ಅನುಸರಿಸಲಾಗಿದೆ. ಮಹಿಳೆ ಕೆಲವೇ ದಿನಗಳಲ್ಲಿ ಗುಣಮುಖರಾಗಿದ್ದಾರೆ. ಪಿತ್ತಕೋಶದಲ್ಲಿ ಇಷ್ಟು ಪ್ರಮಾಣದಲ್ಲಿ ಕಲ್ಲು ದೊರೆತದ್ದು ಅಪರೂಪ’ ಎಂದು ಅಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.