ಹುಣಸೂರು ಗ್ರಾಮಾಂತರ ಪೊಲೀಸರು ತಾಲ್ಲೂಕಿನ ಕೆಂಚನಕೆರೆ ಹೊಸಕೋಟೆಯಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ ಸಮಯದಲ್ಲಿ ಕಾನೂನು ಬಾಹಿರವಾಗಿ ಬಳಸಿದ್ದ ಡಿಜೆ ಸೆಟ್ ವಶಕ್ಕೆ ಪಡೆದಿರುವುದು
ಹುಣಸೂರು: ಗಣೇಶ ವಿಸರ್ಜನೆ ಸಮಯದಲ್ಲಿ ಡಿಜೆ ಬಳಸದಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿದ್ದರೂ, ನಿಯಮ ಮೀರಿ ಸಾರ್ವಜನಿಕ ಸ್ಥಳದಲ್ಲಿ ಬಳಸಿದ ಕಾರಣ ಡಿಜೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ತಾಲ್ಲೂಕಿನ ಕೆಂಚನಕೆರೆ ಹೊಸಕೋಟೆಯಲ್ಲಿ ಶನಿವಾರ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ನಿಷೇಧಿತ ಡಿಜೆ ಸೆಟ್ ಬಳಸಿ ಮೆರವಣಿಗೆ ತೆರಳುತ್ತಿದ್ದರು. ಈ ಸಂಬಂಧ ಮಾಹಿತಿ ಸಿಕ್ಕ ಸ್ಥಳಕ್ಕೆ ಪೊಲೀಸ್ ತೆರಳಿ ಡಿಜೆ ಸೆಟ್ ಇದ್ದ ಟ್ರ್ಯಾಕ್ಟರ್ ಮತ್ತು ಜನರೇಟರ್ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಮುನಿಯಪ್ಪ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಗಣೇಶ ವಿಸರ್ಜಿಸುವ ಸಮಯದಲ್ಲಿ ನಿಯಮ ಮೀರಿ ಡಿಜೆ ಬಳದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.