ADVERTISEMENT

ಗೊ.ರು.ಪರಮೇಶ್ವರಪ್ಪರ ನೆನೆದ ಮೈಸೂರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 1:55 IST
Last Updated 3 ನವೆಂಬರ್ 2020, 1:55 IST
ಮೈಸೂರು ಶರಣ ಮಂಡಲಿ ಹಾಗೂ ಹೊಸಮಠದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೊ.ರು.ಪರಮೇಶ್ವರಪ‍್ಪ ಅವರ ಭಾವಚಿತ್ರಕ್ಕೆ ಹೊಸಮಠದ ಚಿದಾನಂದಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು
ಮೈಸೂರು ಶರಣ ಮಂಡಲಿ ಹಾಗೂ ಹೊಸಮಠದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೊ.ರು.ಪರಮೇಶ್ವರಪ‍್ಪ ಅವರ ಭಾವಚಿತ್ರಕ್ಕೆ ಹೊಸಮಠದ ಚಿದಾನಂದಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು   

ಮೈಸೂರು: ಮೈಸೂರು ಶರಣ ಮಂಡಲಿ ಹಾಗೂ ಹೊಸಮಠದ ವತಿಯಿಂದ ಇಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಈಚೆಗೆ ನಿಧನರಾದ ಗೊ.ರು.ಪರಮೇಶ್ವರಪ‍್ಪ ಅವರನ್ನು ಸ್ಮರಿಸಲಾಯಿತು.‌

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾಸಂಶೋಧನಾಲಯದ ನಿರ್ದೇಶಕ ಶಿವರಾಜಪ್ಪ ಮಾತನಾಡಿ, ಗೊ.ರು.ಪರಮೇಶ್ವರಪ್ಪ ಅವರ ಶಿಸ್ತು, ಬದ್ಧತೆ ಹಾಗೂ ಪ್ರಾಮಾ ಣಿಕತೆಗೆ ಹೆಸರಾದವರು. ಯಾವುದೇ ಕಾರ್ಯಕ್ರಮವಾದರೂ ಪೂರ್ವಸಿದ್ಧತೆಯಿಂದ ಪರಿಣಾಮಕಾರಿ ಯಾಗಿ ಮಾಡುತ್ತಿದ್ದರು. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು 100 ಮನೆಗಳಲ್ಲಿ ಆಯೋಜಿಸಿದ ಹೆಗ್ಗಳಿಕೆ ಇವರು ಎಂದು ಶ್ಲಾಘಿಸಿದರು.‌

ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಪ್ಪ, ಮುಖಂಡ ನಟರಾಜು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.