ADVERTISEMENT

ವಿಶೇಷ ಪ್ರಾರ್ಥನೆ ಮೂಲಕ ಗುಡ್‌ ಫ್ರೈಡೇ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 12:10 IST
Last Updated 11 ಏಪ್ರಿಲ್ 2020, 12:10 IST
ಮೈಸೂರಿನ ಬಿಷಪ್ ಕೆ.ಎ.ವಿಲಿಯಂ ಅವರು ತಮ್ಮ ನಿವಾಸದಲ್ಲಿ ಶುಭ ಶುಕ್ರವಾರದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಮೈಸೂರಿನ ಬಿಷಪ್ ಕೆ.ಎ.ವಿಲಿಯಂ ಅವರು ತಮ್ಮ ನಿವಾಸದಲ್ಲಿ ಶುಭ ಶುಕ್ರವಾರದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು   

ಮೈಸೂರು: ನಗರದಲ್ಲಿ ಶುಭ ಶುಕ್ರವಾರ (ಗುಡ್‌ ಫ್ರೈಡೇ) ಶ್ರದ್ಧಾಭಕ್ತಿಯ ಮೂಲಕ ಆಚರಿಸಲಾಯಿತು.

ಬಿಷಪ್ ಕೆ.ವಿ.ವಿಲಿಯಂ ಅವರು ತಮ್ಮ ನಿವಾಸದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಹುತೇಕ ಎಲ್ಲ ಚರ್ಚ್‌ಗಳು ಬಿಕೋ ಎನ್ನುತ್ತಿದ್ದವು. ಕ್ರೈಸ್ತರು ತಮ್ಮ ತಮ್ಮ ಮನೆಗಳಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿದರು.

ಇತಿಹಾಸ ಪ್ರಸಿದ್ಧ ಸೇಂಟ್ ಫಿಲೊಮಿನಾ ಚರ್ಚ್‌ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಹೆಚ್ಚಿನ ಜನಸಂದಣಿ ಎಲ್ಲೂ ಕಾಣಿಸಲಿಲ್ಲ. ಮನೆಗಳಲ್ಲೂ ಸಾಮಾಜಿಕ ಅಂತರ ಪಾಲಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.