
ಮೈಸೂರು: ‘ರಾಜ್ಯ ಸರ್ಕಾರ ದ್ವೇಷಪೂರಿತ ಭಾಷಣವನ್ನು ಬರೆದು ಕೊಟ್ಟಿತ್ತು. ಅದನ್ನು ರಾಜ್ಯಪಾಲರು ಹೇಗೆ ಓದುತ್ತಾರೆ?’ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಕೇಳಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ವಿರುದ್ದ ಖಂಡನಾ ನಿರ್ಣಯದಂತಹ ಭಾಷಣ ಸಿದ್ಧಪಡಿಸಲಾಗಿತ್ತು. ಹಾಗಾಗಿ, ಅವರು ಓದಿಲ್ಲ. ರಾಜ್ಯಪಾಲರ ಸುತ್ತ ಮಾರ್ಷಲ್‌ಗಳು ಇಲ್ಲದೆ ಹೋಗಿದ್ದರೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ಥಳಿಸುತ್ತಿದ್ದರೇನೋ’ ಎಂದು ದೂರಿದರು.
‘ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಂತ್ರಿ ಸ್ಥಾನ ಪಡೆಯಲು ದುರ್ನಡೆ ತೋರಿ, ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಕರ್ನಾಟಕ ತಲೆ ತಗ್ಗಿಸುವ ಸ್ಥಿತಿಯನ್ನು ಕಾಂಗ್ರೆಸ್ ಶಾಸಕರು ತಂದಿಟ್ಟಿದ್ದಾರೆ. ಪುಂಡ, ಪೋಕರಿಗಳಂತೆ ಆ ಪಕ್ಷದ ಶಾಸಕರು ವರ್ತಿಸಿದ್ದಾರೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಾಸಕರಿಗೆ ಚಿತಾವಣೆ ಕೊಟ್ಟು ಎಲ್ಲವನ್ನೂ ನೋಡುತ್ತಿದ್ದಾರೆ. ಸಂಖ್ಯಾಬಲವಿದೆ ಎಂಬ ಮದದಲ್ಲಿ ಕಾಂಗ್ರೆಸ್ ಈ ರೀತಿ ವರ್ತಿಸಿದೆ. ಸಿದ್ದರಾಮಯ್ಯ ಬಿಕಾರಿ ಸರ್ಕಾರ ನಡೆಸುತ್ತಿದ್ದಾರೆ. ವಿಬಿ– ಜಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರ ₹ 2ಸಾವಿರ ಕೋಟಿ ಕೊಡಬೇಕಿದೆ. ಅದನ್ನು ಕೊಡಲು ಇವರ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಗಲಾಟೆ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ ಯಾವತ್ತು ತೊಲಗುತ್ತಾರೆ? ಈ ಸರ್ಕಾರ ಯಾವಾಗ ಕೊನೆಯಾಗುತ್ತದೆ ಎಂದು ಜನ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ತೊಲಗಿದ ನಂತರ ಕಾಂಗ್ರೆಸ್‌ಗೆ ಅಧೋಗತಿ ಬರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.