ಮೈಸೂರು: ಇದು ಜಿಲ್ಲಾಧಿಕಾರಿ ಕಚೇರಿ. ಕೆಲವೇ ತಿಂಗಳ ಹಿಂದೆಯಷ್ಟೇ ಈ ಭವ್ಯ ಕಚೇರಿಗೆ ಜಿಲ್ಲಾಧಿಕಾರಿ ಸೇರಿದಂತೆ ಸಿಬ್ಬಂದಿ ಸ್ಥಳಾಂತರಗೊಂಡಿದ್ದಾರೆ. ಹೊರನೋಟಕ್ಕೆ ಭವ್ಯವಾಗಿ ಕಾಣುವ ಈ ಕಟ್ಟಡದೊಳಕ್ಕೆ ಹೋಗುವ ಯಾರಿಗೇ ಆದರೂ, ‘ಇದು ಇನ್ನಷ್ಟು ಜನಸ್ನೇಹಿ ಯಾಗಬೇಕು’ ಎಂದು ಅನ್ನಿಸದೇ ಇರದು.
ಕಚೇರಿಗೆ ತೆರಳಲು ಅಂಗವಿಕಲರಿಗೆ ರ‍್ಯಾಂಪ್ ಇದೆ. ಆದರೆ ಅಡ್ಡಾದಿಡ್ಡಿ ವಾಹನ ನಿಲುಗಡೆಯ ಮೇಲೆ ನಿಯಂತ್ರಣ ವಿಲ್ಲದೆ, ಅದು ಇದ್ದೂ ಇಲ್ಲದಂತಿದೆ. ಹೊಸ ಕಟ್ಟಡದಲ್ಲೇ ಬಳಕೆಗೆ ಬಾರದ ಹಳೇ ವಸ್ತುಗಳ ರಾಶಿ ಕಾಣುತ್ತದೆ. ಶೌಚಾಲಯ ಗಳಿದ್ದರೂ, ಮೂಲೆಯೊಂದರಲ್ಲಿ ಉಗುಳಿರುವುದು, ಮೂತ್ರ ವಿಸರ್ಜಿಸಿರುವ ದೃಶ್ಯವನ್ನೂ ಕಾಣಬಹುದು.
ಮಹಾನಗರ ಪಾಲಿಕೆ ಕಚೇರಿಗೆ ಕಾಲಿಟ್ಟ ತಕ್ಷಣ ಎಡಬದಿಯಲ್ಲಿ ನೀಲಿ ಬಣ್ಣದಲ್ಲಿ ಶುದ್ಧ ಕುಡಿಯುವ ನೀರು ಪೋಸ್ಟರ್ ಎದ್ದು ಕಾಣುವಂತೆ ಇದೆ. ಆದರೆ, ನಲ್ಲಿ ತಿರುಗಿಸಿದರೆ ನೀರೇ ಬರುವುದಿಲ್ಲ. ಮೆಟ್ಟಿಲುಗಳ ಬಳಿ ರ‍್ಯಾಂಪ್ ಒಂದೇ ಸಮ ಎತ್ತರವಾಗಿದೆ. ಹೀಗಾಗಿ ಬಳಕೆಗೆ ಸೂಕ್ತವಾಗಿಲ್ಲ.
ಜಿಲ್ಲಾ ಕೇಂದ್ರದ ಪ್ರಮುಖ ಆಡಳಿತ ಕಚೇರಿಯೇ ಹೀಗಿರಬೇಕಾದರೆ, ತಾಲ್ಲೂಕು ಕೇಂದ್ರಗಳ ಕಚೇರಿ ಹೇಗಿರ ಬಹುದು ಎಂದು ನೋಡಿದರೆ, ಅಲ್ಲಿಯೂ ಇಂಥದ್ದೇ ಪರಿಸ್ಥಿತಿ. ನೀರು, ಶೌಚಾಲಯದಂಥ ಕನಿಷ್ಠ ಸೌಕರ್ಯಗಳಿಗೂ ಬರ.
ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಿವೆಯೇ ಎಂದು ‘ಪ್ರಜಾವಾಣಿ’ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ, ತಹಶೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿದಾಗ ಸೌಕರ್ಯಗಳ ಕೊರತೆ ಎದ್ದು ಕಂಡಿತು. ಕೃಷಿ ಇಲಾಖೆಯು ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಸೌಕರ್ಯಗಳ ಕೊರತೆ ಅಷ್ಟಾಗಿ ಕಂಡು ಬರಲಿಲ್ಲ.
ಬಯಲು ಶೌಚಾಲಯ ಬಳಕೆ ಬೇಡ, ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ನೀರು ಕುಡಿಯಿರಿ ಎಂದು ಆಂದೋಲನವನ್ನೇ ಹಮ್ಮಿಕೊಳ್ಳುತ್ತಿರುವ ಸರ್ಕಾರಿ ಇಲಾಖೆಯ ಕಚೇರಿಗಳಲ್ಲೇ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ.
ಜಿಲ್ಲಾ ಕೇಂದ್ರದ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ, ಕಟ್ಟಡಗಳು ಬೃಹತ್ತಾಗಿವೆ. ಅಗತ್ಯ ತಕ್ಕಂತೆ ಸೌಲಭ್ಯ, ಜನರಿಗೆ ಸಿಗಬೇಕಾದ ಸ್ಪಂದನೆ ಇಲ್ಲ ಎಂಬುದು ಅಲ್ಲಿಗೆ ಬಂದ ಜನರಿಂದ ಕೇಳಿ ಬರುತ್ತಿದೆ.
ನಜರಬಾದ್‌ನಲ್ಲಿರುವ ಮಿನಿ ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಕಚೇರಿಗಳಿವೆ. ಜನರಿಗಾಗಿ ಕುರ್ಚಿಗಳಿವೆ. ಆದರೆ, ಶುದ್ಧ ನೀರಿನ ಫಿಲ್ಟರ್ ಮುರಿದು ಬಿದ್ದಿದೆ. ಇನ್ನೊಂದು ಫಿಲ್ಟರ್ ತುಕ್ಕು ಹಿಡಿದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿಯಲ್ಲಿ ಸೌಲಭ್ಯಗಳಿವೆ. ಅಂಗವಿಕಲರು ಸಾಗಲು ಕಟ್ಟಡದಲ್ಲಿನ ಬ್ಯಾಂಕ್ ಬಳಿ ದಾರಿ ಇದ್ದರೂ ಸಮಸ್ಯೆ ತಪ್ಪಿಲ್ಲ.
ಕೆ.ಆರ್.ನಗರದ ಬಹುತೇಕ ಕಚೇರಿಗಳಲ್ಲಿ ಶುದ್ಧ ನೀರು, ಶೌಚಾಲಯವಿಲ್ಲ. ಕೆಲ ಕಡೆ ನೀರು ಘಟಕವಿದ್ದರೂ ನಿರ್ವಹಣೆ ಇಲ್ಲ. ಹಲವೆಡೆ ಶೌಚಾಲಯವೇ ಇಲ್ಲ. ಇರುವ ಕಡೆ ದುರ್ವಾಸನೆಯಿಂದ ಬಳಸಲು ಯೋಗ್ಯವಾಗಿಲ್ಲ.
ಶೌಚಾಲಯಕ್ಕೆ ಬೀಗ: ಪಿರಿಯಾಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶೌಚಾಲಯದ ನಿರ್ವಹಣೆ ಸರಿಯಿಲ್ಲ. ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ಬೀಗ ಹಾಕಿರುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಟಿ. ಜೆ.ಆನಂದ್ ದೂರಿದರು.
ಲಿಫ್ಟ್ ಇಲ್ಲ, ರ‍್ಯಾಂಪ್ ಇಲ್ಲ: ಎಚ್.ಡಿ.ಕೋಟೆಯ ಮಿನಿ ವಿಧಾನಸೌಧದಲ್ಲಿ ಅಂಗವಿಕಲರಿಗೆ ರ‍್ಯಾಂಪ್ ಇಲ್ಲ. ಲಿಫ್ಟ್ ಅಳವಡಿಸಿಲ್ಲ. ‘ಅಂಗವಿಕಲರಿಗಾಗಿ ಸೌಲಭ್ಯ ಕಲ್ಪಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು. ನಂಜನಗೂಡು ಮಿನಿ ವಿಧಾನಸೌಧದ ಕಚೇರಿಗಳು ಸಂಕೀರ್ಣವಾಗಿದೆ. 3 ಮಹಡಿಗಳ ಕಟ್ಟಡವಾಗಿದ್ದರೂ ತೆರಳಲು ಜಾರು ಮಾರ್ಗ ಅಥವಾ ಲಿಫ್ಟ್ ವ್ಯವಸ್ಥೆ ಇಲ್ಲ.
ಬಿಎಸ್‌ಎನ್‌ಎಲ್ ಕಟ್ಟಡವೇ ಗತಿ: ಸಾಲಿಗ್ರಾಮ ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲದೆ ಬಿಎಸ್‌ಎನ್‌ಎಲ್ ಕಚೇರಿಯ ಕಟ್ಟಡದಲ್ಲಿ ಆಡಳಿತ ನಡೆಸುತ್ತಿದೆ. ‘ರೈತರು ಕಚೇರಿಗೆ ಬಂದು ಸಮಸ್ಯೆಗಳನ್ನು ಹೇಳಿದರೆ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್ 2 ತಹಶೀಲ್ದಾರ್ ಅವರು ನಾನು ಜಾತಿ, ಆದಾಯ ಪ್ರಮಾಣ ಪತ್ರ ವಿಭಾಗವನ್ನು ನೋಡಿ ಕೊಳ್ಳುತ್ತಿರುವೆ ನೀವು ಕೆ.ಆರ್.ನಗರದ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ’ ಎಂದು ಹೇಳುತ್ತಾರೆ.
ನಾಮಕಾವಾಸ್ಥೆ ತಾಲ್ಲೂಕು: ಸರಗೂರು ತಾಲ್ಲೂಕು ಕೇಂದ್ರ ವಾದರೂ ನಾಮಕವಾಸ್ಥೆ ಎಂಬಂತಾಗಿದೆ. ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಖಜಾನೆ ಮೂರು ಇಲಾಖೆ ಬಿಟ್ಟರೆ ಉಳಿದ ಯಾವುದೇ ಇಲಾಖೆ ಕಚೇರಿ ಶುರುವಾಗಿಲ್ಲ. ಜನರು ಎಚ್.ಡಿ.ಕೋಟೆಗೆ ಅಲೆಯುವುದು ತಪ್ಪಿಲ್ಲ.
ಸೌಲಭ್ಯ ಇವೆ: ತಿ.ನರಸೀಪುರ ತಾಲ್ಲೂಕು ಕಚೇರಿಯಲ್ಲಿ ಶೌಚಾಲಯ, ಕುಡಿಯುವ ನೀರು ಲಭ್ಯವಿದೆ. ಅಂಗವಿಕಲರಿಗೆ ವೃದ್ಧರಿಗೆ ರ್‍ಯಾಂಪ್ ವ್ಯವಸ್ಥೆಯೂ ಇದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂಬುದು ಸಾರ್ವಜನಿಕರ ದೂರು.
ನಿರ್ವಹಣೆ: ಪ್ರದೀಪ ಕುಂದಣಗಾರ
ಪೂರಕ ಮಾಹಿತಿ: ಪಂಡಿತ ನಾಟೀಕರ್, ಎಚ್.ಎಸ್. ಸಚ್ಚಿತ್, ಬಿ.ಆರ್.ಗಣೇಶ್, ಯಶವಂತ, ಎಂ.ಮಹದೇವ, ಪ್ರಕಾಶ್, ಸತೀಶ್ ಆರಾಧ್ಯ, ಎಸ್.ಆರ್.ನಾಗಾರಾಮ್
ಶಿಥಿಲ ಕಟ್ಟಡ ಸಮಸ್ಯೆ ಆಗರ ಹುಣಸೂರು: ದೇವರಾಜ ಅರಸು ಮುಖ್ಯಮಂತ್ರಿ ಅವಧಿಯಲ್ಲಿ ನಿರ್ಮಾಣಗೊಂಡ ತಾಲ್ಲೂಕು ಕಚೇರಿ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ಮಾಳಿಗೆ ಸೋರಿ ದಾಖಲೆ ರಕ್ಷಿಸಿಕೊಳ್ಳುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಪವಿಭಾಗ ಕೇಂದ್ರ ಕಚೇರಿಯಲ್ಲಿ ಶೌಚಾಲಯ ಕುಡಿಯುವ ನೀರು ಕುರ್ಚಿ ವ್ಯವಸ್ಥೆ ಇಲ್ಲ. ಅಂಗವಿಕಲರ ಸ್ನೇಹಿಯಾಗಬೇಕಿದ್ದ ರ‍್ಯಾಂಪ್ ಅವ್ಯವಸ್ಥೆಯಿಂದ ಕೂಡಿದೆ.
ಅಂಗವಿಕಲರಿಗೆ ಸೌಲಭ್ಯವೇ ಇಲ್ಲ ಮೈಸೂರು ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳ ಕಚೇರಿಗಳಲ್ಲಿ ಅಂಗವಿಕಲರಿಗೆ ಮೂಲ ಸೌಲಭ್ಯವೇ ಇಲ್ಲದಂತಾಗಿದೆ. ಈ ಬಗ್ಗೆ ಡಿ. 3ರಂದು ನಡೆಸಿದ ಅಂಗವಿಕಲರ ಕ್ರೀಡಾಕೂಟದಲ್ಲಿ ನಮಗೆ ಸೌಲಭ್ಯವನ್ನೇ ಕೊಡುತ್ತಿಲ್ಲ ಕಾಟಾಚಾರಕ್ಕೆ ಏಕೆ ಈ ಕೂಟವೆಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದೇವೆ. ಪ್ರಭುಸ್ವಾಮಿ ಜಿಲ್ಲಾಧ್ಯಕ್ಷ ರಾಜ್ಯ ಅಂಗವಿಕಲರ ರಕ್ಷಣಾ ವೇದಿಕೆ ದಾಖಲೆ ರಕ್ಷಣೆಗೆ ಹೆಣಗಾಟ ಜಿಲ್ಲೆಯಲ್ಲೇ ಅತ್ಯಂತ ಹಳೆ ಕಟ್ಟಡದಲ್ಲಿ ಉಪವಿಭಾಗಾಧಿಕಾರಿ ಕಚೇರಿ ನಡೆದಿದ್ದು ದಾಖಲೆಗಳ ರಕ್ಷಣೆಗೂ ಹೆಣಗುವ ಪರಿಸ್ಥಿತಿ ಎದುರಾಗಿದೆ. ಅನ್ನದಾತರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಇಲಾಖೆ ಸಕ್ರಿಯವಾಗಿದೆ,. ಮಂಜುನಾಥ್ ಹುಣಸೂರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ದುರ್ವಾಸನೆಬಯಲು ಶೌಚಾಲಯ ಮಾಡಬೇಡಿ ಎಂದು ತಾಲ್ಲೂಕು ಪಂಚಾಯಿತಿ ವಿಶೇಷ ಆಂದೋಲನ ನಡೆಸುತ್ತಿದೆ. ಆದರೆ ಕಚೇರಿಗೆ ಬರುವ ಜನರು ಶೌಚಾಲಯ ಪಾಳು ಬಿದ್ದಿದ್ದರಿಂದ ಅದರ ಬಳಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಇಲ್ಲಿನ ಆವರಣ ಸದಾ ದುರ್ವಾಸನೆಯಿಂದ ಕೂಡಿರುತ್ತದೆ. ಮಹದೇವ್ ಕೆ.ಆರ್.ನಗರ ಸರಿಪಡಿಸಲು ಕ್ರಮ ತಾ.ಪಂ ಆವರಣದಲ್ಲಿನ ರಸ್ತೆ ಹದಗೆಟ್ಟಿದೆ. ಶೌಚಾಲಯ ಬಳಕೆ ಮಾಡದ ಸ್ಥಿತಿಯಲ್ಲಿದೆ. ರಸ್ತೆ ಮತ್ತು ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಆದಷ್ಟು ಬೇಗ ರಸ್ತೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. -ಜಿ.ಕೆ.ಹರೀಶ್ ತಾ.ಪಂ ಇಒ ಕೆ.ಆರ್.ನಗರ ಅನುದಾನ ಕೊರತೆಯಿಂದ ಸಮಸ್ಯೆ ಸರ್ಕಾರದಿಂದ ಕಚೇರಿಯ ವಾರ್ಷಿಕ ನಿರ್ವಹಣೆಗೆ ಅತ್ಯಂತ ಕಡಿಮೆ ಮೊತ್ತ ಬರುತ್ತಿದ್ದು ಇದರಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಲಾಗುವುದು. ಕುಂಜಿ ಅಹ್ಮದ್ ತಹಶೀಲ್ದಾರ್ ಪಿರಿಯಾಪಟ್ಟಣ ಕಚೇರಿ ಆವರಣವೇ ಬಯಲು ಶೌಚಾಲಯ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಲ್ಲಿ ಬಯಲು ಶೌಚಾಲಯಕ್ಕೆ ಕಡಿವಾಣ ಹಾಕಲು ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯ ಮಾಡಿದರೂ ತಾಲ್ಲೂಕು ಆಡಳಿತ ಕಚೇರಿಯಲ್ಲೇ ಶೌಚಾಲಯವಿಲ್ಲ. ಸತ್ಯಪ್ಪ ಹುಣಸೂರು ನಿವಾಸಿ ಸೌಲಭ್ಯ ಸಿಬ್ಬಂದಿ ಕೊರತೆ ಮಿನಿವಿಧಾನಸೌಧದಲ್ಲಿ ಯಾವ ಇಲಾಖೆಗೆ ತೆರಳಿ ಮನವಿ ಪತ್ರ ಸಲ್ಲಿಸಬೇಕಾದರೂ ಸಹ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಕಾಣುತ್ತಿದೆ. ಮಂಜೇಗೌಡ ಯುವ ಮುಖಂಡ ಶಿರಮಹಳ್ಳಿ ಎಚ್.ಡಿ.ಕೋಟೆ ಲಿಫ್ಟ್ ಅಳವಡಿಸಲು ಮನವಿ ಮಿನಿ ವಿಧಾನ ಸೌಧದಲ್ಲಿ ಸೌಲಭ್ಯ ಕೊರತೆ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಕಟ್ಟಡದಲ್ಲಿ ಶೀಘ್ರವೇ ಲಿಫ್ಟ್ ಅಳವಡಿಸಬೇಕು. ಶಂಕರಪುರ ಸುರೇಶ್ ನಂಜನಗೂಡು
ಮೈಸೂರು: ಜಿಲ್ಲೆಯ ತಾಲ್ಲೂಕು ಕಚೇರಿಗಳು ಹಾಗೂ ಜಿಲ್ಲಾಧಿಕಾರಿ ಕಚೇರಿ ಮೂಲಸೌಲಭ್ಯಗಳ ಕೊರತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಹಳ್ಳಿ–ಊರುಗಳಿಂದ ಬರುವ ಜನರಿಗೆ ಈ ಸನ್ನಿವೇಶವೂ ದೊಡ್ಡ ಸಮಸ್ಯೆಯಾಗಿದೆ. ಬಯಲು ಶೌಚಾಲಯ ಬಳಕೆ ಬೇಡ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ನೀರು ಕುಡಿಯಿರಿ ಎಂದು ಆಂದೋಲನವನ್ನೇ ಹಮ್ಮಿಕೊಳ್ಳುತ್ತಿರುವ ಸರ್ಕಾರಿ ಇಲಾಖೆಯ ಕಚೇರಿಗಳಲ್ಲೇ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಜಿಲ್ಲಾ ಕೇಂದ್ರದ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ ಕಟ್ಟಡಗಳು ಬೃಹತ್ತಾಗಿವೆ. ಅಗತ್ಯ ತಕ್ಕಂತೆ ಸೌಲಭ್ಯ ಜನರಿಗೆ ಸಿಗಬೇಕಾದ ಸ್ಪಂದನೆ ಇಲ್ಲ ಎಂಬುದು ಅಲ್ಲಿಗೆ ಬಂದ ಜನರಿಂದ ಕೇಳಿ ಬರುತ್ತಿದೆ. ಮೈಸೂರು ನಗರದ ಸಿದ್ಧಾರ್ಥ ಲೇಔಟ್‌ನಲ್ಲಿ ತಲೆ ಎತ್ತಿರುವ ಜಿಲ್ಲಾಧಿಕಾರಿ ನೂತನ ಕಚೇರಿ ಬೃಹತ್ ಶ್ವೇತ ಕಟ್ಟಡ ಸುಂದರವಾಗಿದೆ. ಒಂದೇ ಸೂರಿನಡಿ ಹಲವು ಇಲಾಖೆಗಳು ಇಲ್ಲಿಗೆ ಕಾರ್ಯ ಮಾಡುವಂತಾಗಲಿ ಎಂಬ ಆಶಯ ಪೂರ್ಣಗೊಂಡಿಲ್ಲ. ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಪ್ರವೇಶಕ್ಕೆ ಬಲ ಬದಿಯಲ್ಲಿ ರ‍್ಯಾಂಪ್ ಇದೆ. ಆ ದಾರಿಯಲ್ಲಿಯೇ ದ್ವಿಚಕ್ರ ವಾಹನಗಳೇ ನಿಲ್ಲಿಸಿರುತ್ತಾರೆ ಹೀಗಾಗಿ ಅಂಗವಿಕಲರು ಒಳಹೋಗಲು ಸಾಹಸ ಪಡುವಂತಾಗಿದೆ. ಆವರಣದಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಜಾಗವಿದ್ದರೂ ಯಾರೋ ಸಿಬ್ಬಂದಿ ಸ್ಕೂಟರ್‌ನ್ನು ಕಟ್ಟಡದ ಒಳಗೆ ನಿಲ್ಲಿಸಿರುವುದರಿಂದ ಜನರಿಗೆ ಕಾರಿಡಾರ್‌ನಲ್ಲಿ ಸಾಗಲು ತೊಂದರೆಯಾಗುತ್ತಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಡದ ಮೂಲೆಯಲ್ಲಿ ಶೌಚಾಲಯಗಳು ಇವೆ. ಆದರೂ ಜನರ ಬೇಜವಾಬ್ದಾರಿಯೋ ಮುಂದೆ ಹೋಗಲು ಬೇಸರವೋ ಏನೋ ಕಟ್ಟಡದ ಒಂದು ಭಾಗದಲ್ಲಿ ಮೂತ್ರ ವಿಸರ್ಜಿಸಿದ್ದಾರೆ. ಒಬ್ಬರನ್ನು ನೋಡಿ ಒಬ್ಬರು ಅಲ್ಲಿಯೇ ಮೂತ್ರ ವಿಸರ್ಜಿಸಿದ್ದರಿಂದ ಗಬ್ಬೆದ್ದು ನಾರುತ್ತಿದೆ. ವಾಸನೆ ಹೋಗಲೆಂದು ಸಾಕಷ್ಟು ಫಿನಾಯಿಲ್ ಆಸಿಡ್ ಸುರಿದಿದ್ದರಿಂದ ಕಲೆಗಳು ಹಾಗೆ ಉಳಿದಿವೆ. ಅದನ್ನು ಸ್ವಚ್ಛ ಕೂಡಾ ಮಾಡಿಲ್ಲ. ಸರ್ಕಾರದ ಆಸ್ತಿಗಳ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೂ ಕಾಳಜಿ ಇರಬೇಕು. ಅಲ್ಲದೇ ಸಿಬ್ಬಂದಿಗೂ ನಮ್ಮದು ಎಂಬ ಜವಾಬ್ದಾರಿ ಇರಬೇಕು. ಇಲ್ಲಿ ಯಾರ ತಪ್ಪು ಎಂಬುದು ಯಕ್ಷಪ್ರಶ್ನೆಯಾಗಿದೆ. ನಜರಬಾದ್‌ನಲ್ಲಿರುವ ಮಿನಿವಿಧಾನಸೌಧದಲ್ಲಿ ಎರಡು ಅಂತಸ್ತಿನ ಕಟ್ಟಡವಿದೆ. ಇಲ್ಲಿ ವಿವಿಧ ಇಲಾಖೆಗಳ ಕಚೇರಿಗಳಿವೆ. ಕಾರ್ಯ ನಿಮಿತ್ತ ಇಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕೆ ಆಸನ ವ್ಯವಸ್ಥೆ ಚನ್ನಾಗಿದೆ. ಆದರೆ ಶುದ್ಧ ನೀರಿನ ಫಿಲ್ಟರ್ ಮುರಿದು ಹಾಗೆ ಬಿದ್ದಿದೆ. ಇನ್ನೊಂದು ನೀರಿನ ಫಿಲ್ಟರ್ ತುಕ್ಕು ಹಿಡಿದಿದೆ. ಮಹಾನಗರ ಪಾಲಿಕೆ ಕಚೇರಿಗೆ ಕಾಲಿಟ್ಟ ತಕ್ಷಣ ಎಡಬದಿಯಲ್ಲಿ ನೀಲಿ ಬಣ್ಣದಲ್ಲಿ ಶುದ್ಧ ಕುಡಿಯುವ ನೀರು ಪೋಸ್ಟರ್ ಎದ್ದು ಕಾಣುವಂತೆ ಇದೆ. ಆದರೆ ನಲ್ಲಿ ತಿರುಗಿಸಿದರೆ ನೀರೇ ಬರುವುದಿಲ್ಲ. ಮೆಟ್ಟಿಲುಗಳ ಬಳಿ ರ‍್ಯಾಂಪ್ ಒಂದೇ ಸಮ ಎತ್ತರವಾಗಿದೆ. ಹೀಗಾಗಿ ಬಳಕೆಗೆ ಸೂಕ್ತವಾಗಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿಯಲ್ಲಿ ಸೌಲಭ್ಯಗಳು ಇವೆ. ಅಂಗವಿಕಲರು ಸಾಗಲು ಕಟ್ಟಡದಲ್ಲಿನ ಬ್ಯಾಂಕ್ ಬಳಿ ದಾರಿ ಇದೆ ಆದರೆ ಅಲ್ಲಿ ಕುರ್ಚಿಗಳನ್ನು ಇಟ್ಟಿರುವುದರಿಂದ ತೊಂದರೆಯಾಗುತ್ತಿದೆ. ಮೂಲ ಸೌಲಭ್ಯವೇ ಇಲ್ಲ ಕೆ.ಆರ್.ನಗರ: ಪಟ್ಟಣದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು ಶೌಚಾಲಯ ಸಾರ್ವಜನಿಕರಿಗೆ ಒದಗಿಸುವುದು ಕನಸಿನ ಮಾತಾಗಿದೆ. ಕೆಲ ಕಡೆ ಶುದ್ಧ ಕುಡಿಯುವ ನೀರು ಘಟಕ ಇದ್ದರೂ ಸಹ ನಿರ್ವಹಣೆ ಇಲ್ಲದೆ ಸೊರಗಿ ಹೋಗಿವೆ. ಇನ್ನು ಹಲವು ಕಡೆ ಶೌಚಾಲಯವೇ ಇಲ್ಲ. ಇರುವ ಕಡೆ ದುರ್ವಾಸನೆಯಿಂದ ಬಳಸಲು ಯೋಗ್ಯವಾಗಿಲ್ಲ. ಶೌಚಾಲಯಕ್ಕೆ ಬೀಗ ಪಿರಿಯಾಪಟ್ಟಣ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಿದ್ದ ಶೌಚಾಲಯ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರು ಬಳಸಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿದ್ದರೂ ಅದು ಸದಾ ಬೀಗ ಹಾಕಿರುವುದರಿಂದ ಅಂಗವಿಕಲರಿಗೆ ಉಪಯೋಗಕ್ಕೆ ಬಾರದಂತಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಟಿ. ಜೆ.ಆನಂದ್. ಸಕಾಲದಲ್ಲಿ ಸಲ್ಲಿಸುವ ಅರ್ಜಿಗಳನ್ನು ಬಿಟ್ಟರೆ ಇತರೆ ಅರ್ಜಿಗಳ ಪ್ರತಿ ಬಾರಿಯೂ ತಡವಾಗುತ್ತಿದೆ. ಅನಾವಶ್ಯಕ ವಿಳಂಬವನ್ನು ತಪ್ಪಿಸಲು ಎಲ್ಲಾ ಸೇವೆಗಳನ್ನು ಕಂದಾಯ ಇಲಾಖೆ ಸಕಾಲ ವ್ಯಾಪ್ತಿಗೆ ಒಳಪಡಿಸಬೇಕು ಎಂಬುದು ರೈತ ಪರೀಕ್ಷಿತ್ ಕುಮಾರ್ ಮನವಿ. ಲಿಫ್ಟ್ ಇಲ್ಲ ರ‍್ಯಾಂಪ್ ಇಲ್ಲ... ಎಚ್.ಡಿ.ಕೋಟೆ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಅಂಗವಿಕಲರಿಗೆ ರ‍್ಯಾಂಪ್ ಇಲ್ಲ. ಲಿಫ್ಟ್ ಅಳವಡಿಸಿಲ್ಲ. ‘ಕಟ್ಟಡ ನಿರ್ಮಿಸುವಾಗ ಅಂಗವಿಕಲರಿಗಾಗಿ ಸೌಲಭ್ಯ ಕಲ್ಪಿಸಿಲ್ಲ. ಈ ಬಗ್ಗೆ ಗಮನ ಹರಿಸಿದ್ದೇನೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಕಲ್ಪಿಸಲು ಪತ್ರ ಬರೆಯುತ್ತೇನೆ. ತಾತ್ಕಾಲಿಕವಾಗಿ ಕಚೇರಿಗೆ ಬರುವ ಎಲ್ಲಾ ಅಂಗವಿಕಲರಿಗೆ ಅಧಿಕಾರಿಗಳು ಅವರ ಸೌಲಭ್ಯಗಳನ್ನು ಕಲ್ಪಿಸಲು ಕೆಳಗೆ ಇಳಿದು ಬಂದು ಮಾಡಿಕೊಡುವಂತೆ ಎಲ್ಲಾ ಇಲಾಖೆಗೂ ಸೂಚಿಸುತ್ತೇನೆ’ ಎಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು. ನಂಜನಗೂಡು: ಮಿನಿ ವಿಧಾನಸೌಧದ ವಿವಿಧ ಸರ್ಕಾರಿ ಕಚೇರಿಗಳು ಸಂಕೀರ್ಣವಾಗಿದೆ. 3 ಮಹಡಿಗಳ ಕಟ್ಟಡವಾಗಿದ್ದರೂ ತೆರಳಲು ಜಾರು ಮಾರ್ಗ ಅಥವಾ ಲಿಫ್ಟ್ ವ್ಯವಸ್ಥೆ ಇಲ್ಲ. ಬಿಎಸ್‌ಎನ್‌ಎಲ್ ಕಟ್ಟಡದಲ್ಲಿ ತಾಲ್ಲೂಕು ಕಚೇರಿ ಸಾಲಿಗ್ರಾಮ: ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲದೆ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಕಟ್ಟಡದಲ್ಲಿ ಆಡಳಿತ ನಡೆಸುತ್ತಿದೆ. ರೈತರು ಕಚೇರಿಗೆ ಬಂದು ಸಮಸ್ಯೆಗಳನ್ನು ಹೇಳಿದರೆ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್ 2 ತಹಶೀಲ್ದಾರ್ ಅವರು ನಾನು ಜಾತಿ ಆದಾಯ ಪ್ರಮಾಣ ಪತ್ರ ವಿಭಾಗವನ್ನು ನೋಡಿ ಕೊಳ್ಳುತ್ತಿರುವೆ ನೀವು ಕೆ.ಆರ್.ನಗರದ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಎಂದು ಹೇಳುತ್ತಾರೆ. ನಾಮಕಾವಾಸ್ಥೆ ತಾಲ್ಲೂಕು ಸರಗೂರು: ತಾಲ್ಲೂಕು ಕೇಂದ್ರ ಆಗಿದೆ. ಆದರೆ ನಾಮಕವಾಸ್ಥೆ ಎಂಬಂತಾಗಿದೆ. ತಾಲ್ಲೂಕು ಕಚೇರಿ ತಾಲ್ಲೂಕು ಪಂಚಾಯಿತಿ ಟ್ರಝರಿ ಮೂರು ಇಲಾಖೆ ಬಿಟ್ಟರೆ ಉಳಿದ ಯಾವುದೇ ಇಲಾಖೆಗಳು ಇನ್ನೂ ಆಗಿಲ್ಲ. ಜನರು ಎಚ್.ಡಿ.ಕೋಟೆಗೆ ಅಲೆಯುವುದು ತಪ್ಪಿಲ್ಲ. ಮಧ್ಯವರ್ತಿಗಳ ಹಾವಳಿ ತಿ.ನರಸೀಪುರ: ತಾಲ್ಲೂಕು ಕಚೇರಿಯಲ್ಲಿ ಮೂಲ ಸೌಕರ್ಯಗಳಾದ ಶೌಚಾಲಯ ಕುಡಿಯುವ ನೀರು ಲಭ್ಯವಿದೆ. ಅಂಗವಿಕಲರಿಗೆ ವೃದ್ಧರಿಗೆ ರ್‍ಯಾಂಪ್ ವ್ಯವಸ್ಥೆಯೂ ಇದೆ. ಸಾರ್ವಜನಿಕ ಕೆಲಸ ಕಾರ್ಯಗಳು ತ್ವರಿತವಾಗಿ ವಿಲೇವಾರಿ ಮಾಡುವಲ್ಲಿ ನಿರೀಕ್ಷಿತ ವೇಗ ಇಲ್ಲ. ಅನಗತ್ಯ ವಿಳಂಬ ಮಾಡಲಾಗುತ್ತದೆ. ಜತೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂಬುದು ಸಾರ್ವಜನಿಕರ ದೂರು. ಯಾರು ಏನಂತಾರೇ? ಅಂಗವಿಕಲರಿಗೆ ಸೌಲಭ್ಯವೇ ಇಲ್ಲದಾಗಿದೆ ಮೈಸೂರು ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳ ಕಚೇರಿಗಳಲ್ಲಿ ಅಂಗವಿಕಲರಿಗೆ ಮೂಲ ಸೌಲಭ್ಯವೇ ಇಲ್ಲದಂತಾಗಿದೆ. ಈ ಬಗ್ಗೆ ಡಿ. 3ರಂದು ನಡೆಸಿದ ಅಂಗವಿಕಲರ ಕ್ರೀಡಾಕೂಟದಲ್ಲಿ ನಮಗೆ ಸೌಲಭ್ಯವನ್ನೇ ಕೊಡುತ್ತಿಲ್ಲ ಕಾಟಾಚಾರಕ್ಕೆ ಏಕೆ ಈ ಕೂಟವೆಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದೇವೆ. ಪ್ರಭುಸ್ವಾಮಿ ಜಿಲ್ಲಾಧ್ಯಕ್ಷ ಕ.ರಾ.ಅಂ.ವೇದಿಕೆ ದಾಖಲೆ ರಕ್ಷಣೆಯೇ ಹೆಣಗಾಟ ಜಿಲ್ಲೆಯಲ್ಲೇ ಅತ್ಯಂತ ಹಳೆ ಕಟ್ಟಡದಲ್ಲಿ ಉಪವಿಭಾಗಾಧಿಕಾರಿ ಕಚೇರಿ ನಡೆದಿದ್ದು ದಾಖಲೆಗಳ ರಕ್ಷಣೆಗೂ ಹೆಣಗುವ ಪರಿಸ್ಥಿತಿ ಎದುರಾಗಿದೆ. ಅನ್ನದಾತರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಇಲಾಖೆ ಸಕ್ರಿಯವಾಗಿದೆ. ಮಂಜುನಾಥ್ ತಹಶೀಲ್ದಾರ್ ಕಚೇರಿ ಆವರಣದಲ್ಲಿ ದುರ್ವಾಸನೆ ಬಯಲು ಶೌಚಾಲಯ ಮಾಡಬೇಡಿ ಎಂದು ತಾಲ್ಲೂಕು ಪಂಚಾಯಿತಿ ವಿಶೇಷ ಆಂದೋಲನ ನಡೆಸುತ್ತಿದೆ. ಆದರೆ ಕಚೇರಿಗೆ ಬರುವ ಜನರು ಶೌಚಾಲಯ ಪಾಳು ಬಿದ್ದಿದ್ದರಿಂದ ಅದರ ಬಳಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಇಲ್ಲಿನ ಆವರಣ ಸದಾ ದುರ್ವಾಸನೆಯಿಂದ ಕೂಡಿರುತ್ತದೆ. ಮಹದೇವ್ ಕೆ.ಆರ್.ನಗರ. ಸರಿಪಡಿಸಲು ಕ್ರಮ ತಾ.ಪಂ ಆವರಣದಲ್ಲಿನ ರಸ್ತೆ ಹದಗೆಟ್ಟಿದೆ. ಶೌಚಾಲಯ ಬಳಕೆ ಮಾಡದ ಸ್ಥಿತಿಯಲ್ಲಿದೆ. ರಸ್ತೆ ಮತ್ತು ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಆದಷ್ಟು ಬೇಗ ಕ್ರಮ ಕೈಗೊಂಡು ರಸ್ತೆ ಮತ್ತು ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. -ಜಿ.ಕೆ.ಹರೀಶ್ ತಾ.ಪಂ ಇಒ ಕೆ.ಆರ್.ನಗರ ಅನುದಾನ ಕೊರತೆಯಿಂದ ಸಮಸ್ಯೆ ಸರ್ಕಾರದಿಂದ ಕಚೇರಿಯ ವಾರ್ಷಿಕ ನಿರ್ವಹಣೆಗೆ ಅತ್ಯಂತ ಕಡಿಮೆ ಮೊತ್ತ ಬರುತ್ತಿದ್ದು ಇದರಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಲಾಗುವುದು. ಕುಂಜಿ ಅಹ್ಮದ್ ತಹಶೀಲ್ದಾರ್ ಪಿರಿಯಾಪಟ್ಟಣ *** ಕಚೇರಿ ಆವರಣವೇ ಬಯಲು ಶೌಚಾಲಯ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಲ್ಲಿ ಬಯಲು ಶೌಚಾಲಯಕ್ಕೆ ಕಡಿವಾಣ ಹಾಕಲು ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯ ಮಾಡಿದರು ತಾಲ್ಲೂಕು ಆಡಳಿತ ಕಚೇರಿಯಲ್ಲೇ ಬಯಲು ಶೌಚಾಲಯ ತಪ್ಪಿಲ್ಲ. ಶಿಥಿಲ ಕಟ್ಟಡದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿರುವುದು ತಲೆ ತಗ್ಗಿಸುವ ಸಂಗತಿ ಸತ್ಯಪ್ಪ ಹುಣಸೂರು ನಿವಾಸಿ ಸೌಲಭ್ಯ ಸಿಬ್ಬಂದಿ ಕೊರತೆ ಮಿನಿವಿಧಾನಸೌಧದಲ್ಲಿ ಯಾವ ಇಲಾಖೆಗೆ ತೆರಳಿ ಮನವಿ ಪತ್ರ ಸಲ್ಲಿಸಬೇಕಾದರೂ ಸಹ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಕಾಣುತ್ತಿದೆ. ಮಂಜೇಗೌಡ ಯುವ ಮುಖಂಡ ಶಿರಮಹಳ್ಳಿ. ಎಚ್.ಡಿ.ಕೋಟೆ ಲಿಫ್ಟ್ ಅಳವಡಿಸಲು ಮನವಿ ಮಿನಿ ವಿಧಾನ ಸೌಧದಲ್ಲಿ ಸೌಲಭ್ಯ ಕೊರತೆ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಕಟ್ಟಡದಲ್ಲಿ ಶೀಘ್ರವೇ ಲಿಫ್ಟ್ ಅಳವಡಿಸಬೇಕು. ಶಂಕರಪುರ ಸುರೇಶ್ ನಂಜನಗೂಡು ಶಿಥಿಲ ಕಟ್ಟಡ ಸಮಸ್ಯೆ ಆಗರ ಹುಣಸೂರು: ಶಿಥಿಲಗೊಂಡಿರುವ ತಾಲ್ಲೂಕು ಕಚೇರಿಯಲ್ಲಿ ಆಡಳಿತ ನಡೆದಿದ್ದು ಮೂಲ ಸಮಸ್ಯೆ ಸಿಬ್ಬಂದಿ ಮತ್ತು ನಾಗರಿಕರನ್ನು ಕಾಡುತ್ತಿದ್ದು ಸಮಸ್ಯೆಗಳ ಕೂಪವಾಗಿದೆ. ಹುಣಸೂರು ಉಪವಿಭಾಗ ಕೇಂದ್ರ ಕಚೇರಿಯಲ್ಲಿ ಶೌಚಾಲಯ ಕುಡಿಯುವ ನೀರು ಆಸನದ ವ್ಯವಸ್ಥೆ ಇದಾವುದೂ ಇಲ್ಲದೆ ಸಾರ್ವಜನಿಕರು ನಿತ್ಯ ನಿಟ್ಟುಸಿರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರಾಜ ಅರಸು ಮುಖ್ಯಮಂತ್ರಿ ಅವಧಿಯಲ್ಲಿ ನಿರ್ಮಾಣಗೊಂಡ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ಮಾಳಿಗೆ ಸೋರಿ ದಾಖಲೆ ರಕ್ಷಿಸಿಕೊಳ್ಳುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ವಿಪರ್ಯಾಸ. ನಿತ್ಯ ಸಾವಿರಾರು ಜನರು ಬಂದು ಹೋಗುವ ಕೇಂದ್ರದಲ್ಲಿ ಶೌಚಾಲಯ ಕಟ್ಟಡ ಇದ್ದರು ಬಳಕೆಗೆ ಇಲ್ಲವಾಗದೆ. ಹೀಗಾಗಿ ಸಾರ್ವಜನಿಕರಿಗೆ ಬಹಿರ್ದೆಸೆ ಅನಿವಾರ್ಯವಾಗಿದೆ. ಮಹಿಳೆಯರ ಪರಿಸ್ಥಿತಿ ಶೋಚನೀಯ. ಕುಡಿಯುವ ನೀರಿನ ಘಟಕವೂ ಇಲ್ಲದೆ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಿಸುತ್ತಿದ್ದಾರೆ. ಅಂಗವಿಕಲರ ಸ್ನೇಹಿಯಾಗಬೇಕಿದ್ದ ರ‍್ಯಾಂಪ್ ನಾಮಕಾವಸ್ಥೆಗೆ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.