ಮೈಸೂರು: ‘ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಯುವ ಎಂಜಿನಿಯರ್‌ಗಳು ಹೊಸ ತಾಂತ್ರಿಕ ಬದಲಾವಣೆಗಳಿಗೆ ಪೂರಕವಾಗಿ ತಮ್ಮ ವೃತ್ತಿ ಕೌಶಲ ವೃದ್ಧಿಸಿಕೊಳ್ಳಬೇಕು. ಹೊಸ ವಿಚಾರಗಳಿಗೆ ತಮ್ನನ್ನು ತೆರೆದುಕೊಳ್ಳಬೇಕು’ ಎಂದು ಪ್ರಾಧ್ಯಾಪಕ ಪ್ರೊ.ಎಸ್.ಆರ್.ಮಹದೇವ ಪ್ರಸನ್ನ ಹೇಳಿದರು.
ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿನ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಪದವೀಧರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಶತಮಾನವು ಭಾರತೀಯರ ಶತಮಾನವಾಗಿದೆ. ಆಧುನಿಕ ತಂತ್ರಜ್ಞಾನವು ಶರವೇಗದಲ್ಲಿ ಬೆಳೆಯುತ್ತಿದ್ದು, ಎಐ ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರಗತಿಯಲ್ಲಿ ಬಳಕೆಯಾಗುತ್ತಿದೆ ಎಂದರು.
ಪ್ರೊ.ಗೋಪಾಲನ್ ಜಗದೀಶ್ ಮಾತನಾಡಿ, ‘ಉತ್ತಮ ಜೀವನಶೈಲಿ, ಚಿಂತನೆಗಳು ನಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತವೆ. ಪ್ರತಿಯೊಬ್ಬರೂ ಮೌಲ್ಯಯುತ ಬದುಕನ್ನು ಸಾಗಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿವಿಧ ವಿಭಾಗಗಳಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಸ್ಕಿಲ್‌ಟೆಕ್ ಮೆಮೊರಿಯಲ್ ಅವಾರ್ಡ್ ಹಾಗೂ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಅರುಣ್‌ಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಎಟಿಎಂಇ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್.ವೀರೇಶ್, ಆಡಳಿತ ಮಂಡಳಿ ಸದಸ್ಯರಾದ ಪೊ.ಕೆ.ಚಿದಾನಂದಗೌಡ, ಎಚ್.ವೆಂಕಟೇಶ್, ಪ್ರಾಂಶುಪಾಲರಾದ ಎಲ್.ಬಸವರಾಜ್, ಡೀನ್ ಭಾಗ್ಯಶ್ರೀ, ಕಾರ್ಯಕ್ರಮದ ಪ್ರಧಾನ ಸಂಯೋಜಕ ಪಾರ್ಥಸಾರಥಿ ಎಲ್., ಸಹ ಆಯೋಜಕರಾದ ಶಕುಂತಲಾ, ಪ್ರೊ.ರಾಘವೇಂದ್ರ, ಪ್ರೊ.ಶ್ರೀಶಯನ, ಸತೀಶ್ ಕೆ., ಪ್ರೊ.ಸ್ವಪ್ನ ಎಚ್., ಪ್ರೊ.ಸ್ವಾತಿ, ಪ್ರೊ.ಕಾವ್ಯಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.