ADVERTISEMENT

ಮೈಸೂರು: ಸಿಕ್ಕಿದ್ದು ಗ್ರೆನೇಡ್‌ ಅಲ್ಲ, ಆಟಿಕೆ ವಸ್ತು; ಆತಂಕವಿಲ್ಲ– ಪೊಲೀಸ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 10:47 IST
Last Updated 3 ಏಪ್ರಿಲ್ 2019, 10:47 IST
–ಸಾಂದರ್ಬಿಕ ಚಿತ್ರ
–ಸಾಂದರ್ಬಿಕ ಚಿತ್ರ   

ಮೈಸೂರು: ಇಲ್ಲಿನ ಹಿನಕಲ್ ಫ್ಲೈಓವರ್ ನಲ್ಲಿ ಶಕ್ತಿಶಾಲಿಯಾದ ಗ್ರೆನೇಡ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಗ್ರೆನೇಡ್ ನ್ನು ನಿಷ್ಕ್ರಿಯಗೊಳಿಸಿದ್ದಾರೆ. ಕೆಲಕಾಲ ಆತಂಕದ ವಾತಾವರಣ ಮೂಡಿತ್ತು.

ತಾತ್ಕಾಲಿಕವಾಗಿ ಕೆಲನಿಮಿಷಗಳಷ್ಟು ಕಾಲ ವಾಹನ ಸಂಚಾರವನ್ನು ತಡೆಯಲಾಗಿತ್ತು. ಗ್ರೆನೇಡ್ ಇಲ್ಲಿಗೆ ಹೇಗೆ ಬಂದಿತು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ADVERTISEMENT

ಸಿಕ್ಕಿದ್ದು ಗ್ರೆನೇಡ್‌ ಅಲ್ಲ, ಆಟಿಕೆ ವಸ್ತು – ಪೊಲೀಸ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ಇದೊಂದು ಆಟಿಕೆಯಾಗಿದ್ದು, ನೋಡುವುದಕ್ಕೆ ನಿಜವಾದ ಗ್ರೆನೇಡ್ ತರಹವೇ ಇತ್ತು. ಸದ್ಯ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.