ADVERTISEMENT

‘ಸಾಹಿತ್ಯ ಕ್ಷೇತ್ರಕ್ಕೆ ಜಿ.ಎಸ್.ಸಿದ್ದಲಿಂಗಯ್ಯ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:04 IST
Last Updated 17 ಮೇ 2025, 16:04 IST
ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಭಾವಚಿತ್ರಕ್ಕೆ ಸಾಹಿತಿ ಸಿ.ಪಿ.ಕೃಷಕುಮಾರ್ ಪುಷ್ಪಾರ್ಚನೆ ಮಾಡಿದರು. ಮಡ್ಡೀಕೆರೆ ಗೋಪಾಲ್, ವೈ.ಡಿ.ರಾಜಣ್ಣ, ಮೂಗೂರು ನಂಜುಂಡಸ್ವಾಮಿ, ರಾಜಶೇಖರ ಕದಂಬ ಹಾಜರಿದ್ದರು
ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಭಾವಚಿತ್ರಕ್ಕೆ ಸಾಹಿತಿ ಸಿ.ಪಿ.ಕೃಷಕುಮಾರ್ ಪುಷ್ಪಾರ್ಚನೆ ಮಾಡಿದರು. ಮಡ್ಡೀಕೆರೆ ಗೋಪಾಲ್, ವೈ.ಡಿ.ರಾಜಣ್ಣ, ಮೂಗೂರು ನಂಜುಂಡಸ್ವಾಮಿ, ರಾಜಶೇಖರ ಕದಂಬ ಹಾಜರಿದ್ದರು   

ಮೈಸೂರು: ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನೀಡಿದ ಕೊಡುಗೆ ಅಪಾರ’ ಎಂದು ಸಾಹಿತಿ ಸಿ.ಪಿ.ಕೃಷಕುಮಾರ್ ಹೇಳಿದರು.

ಇಲ್ಲಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ನಡೆದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಧುಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಸಿದ್ದಲಿಂಗಯ್ಯ ಅಲಂಕರಿಸಿದ್ದರು. ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ಅವಕಾಶ ದೊರೆಯದೆ ಇದ್ದದು ವಿಷಾದನೀಯ’ ಎಂದರು.

ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡದ ಸೊಗಡನ್ನು ವಿಶ್ವವ್ಯಾಪಿಯಾಗಿಸಲು ಅವಿರತವಾಗಿ ದುಡಿದವರು ಸಿದ್ದಲಿಂಗಯ್ಯ. ಕುವೆಂಪು ಅವರ ಪ್ರಿಯ ಶಿಷ್ಯರಲ್ಲೊಬ್ಬರಾಗಿದ್ದರು, ಕಾವ್ಯ, ಮಿಮರ್ಶೆ, ಅನುವಾದ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

ADVERTISEMENT

ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕರಾದ ವೈ.ಡಿ.ರಾಜಣ್ಣ, ಪ್ರೊ.ಸಿ.ನಾಗಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.