ADVERTISEMENT

ಗಿನ್ನಿಸ್ ರೆಕಾರ್ಡ್; ಕರಾಟೆಪಟುಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 14:28 IST
Last Updated 26 ಜೂನ್ 2025, 14:28 IST
ಮೈಸೂರು ಪತ್ರಕರ್ತರ ಭವನದಲ್ಲಿ ಗುರುವಾರ ಶೊಟೊಕಾನ್ ಕರಾಟೆ ಶಾಲೆಯ ಕರಾಟೆಪಟುಗಳನ್ನು ಲಯನ್ಸ್ ಗೋಲ್ಡನ್ ಸಿಟಿ ಸಂಸ್ಥೆಯಿಂದ ಸನ್ಮಾನಿಸಲಾಯಿತು
ಮೈಸೂರು ಪತ್ರಕರ್ತರ ಭವನದಲ್ಲಿ ಗುರುವಾರ ಶೊಟೊಕಾನ್ ಕರಾಟೆ ಶಾಲೆಯ ಕರಾಟೆಪಟುಗಳನ್ನು ಲಯನ್ಸ್ ಗೋಲ್ಡನ್ ಸಿಟಿ ಸಂಸ್ಥೆಯಿಂದ ಸನ್ಮಾನಿಸಲಾಯಿತು   

ಮೈಸೂರು: ವರ್ಲ್ಡ್‌ ಕರಾಟೆ ಮಾಸ್ಟರ್‌ ಅಸೋಸಿಯೇಷನ್‌ನಿಂದ ಚೆನ್ನೈನಲ್ಲಿ ಈಚೆಗೆ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧನೆಯಲ್ಲಿ ಪಾಲ್ಗೊಂಡ ನಗರದ ಶೊಟೊಕಾನ್ ಕರಾಟೆ ಶಾಲೆಯ ಪಟುಗಳಿಗೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಲಯನ್ಸ್ ಗೋಲ್ಡನ್ ಸಿಟಿ ವತಿಯಿಂದ ಸನ್ಮಾನಿಸಲಾಯಿತು.

ಲಯನ್ಸ್ ಸಂಸ್ಥೆ ಬಹು ಪರಿಷತ್ ಅಧ್ಯಕ್ಷ ಎನ್.ಕೃಷ್ಣೇಗೌಡ ಮಾತನಾಡಿ, ‘ದೇಶದ 2,996 ಕರಾಟೆ ಪಟುಗಳು ಈ ರೆಕಾರ್ಡ್‌ನಲ್ಲಿ ಭಾಗವಹಿಸಿದ್ದರು. ಎಲ್ಲರೂ ಒಟ್ಟಾಗಿ 32 ನಿಮಿಷಗಳ ಕರಾಟೆ ಪ್ರದರ್ಶನ ನೀಡುವ ಮೂಲಕ ಸಾಧನೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಕರಾಟೆಪಟುಗಳಾದ ಎನ್.ಯೋಗೇಶ್, ಡಿ.ಚೆಲುವರಾಜು, ಪ್ರೀತಮ್ ಚಕ್ರವರ್ತಿ, ಸಿ.ಸಹನಾ, ಸಿ.ಲಾವಣ್ಯ, ಎನ್.ಭವ್ಯಶ್ರೀ, ಸೌಜನ್ಯ, ಎನ್.ಸುಧೀರ್, ವೈ.ಧರಣಿ, ವೈ.ಮಧುನಿಶ ಅವರನ್ನು ಗೌರವಿಸಲಾಯಿತು.

ADVERTISEMENT

ಸ್ಟುಡೆಂಟ್‌ ಗೇಮ್‌ ಕರಾಟೆ ಇಂಡಿಯಾ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಎನ್.ಯೋಗೇಶ್, ಲಯನ್ಸ್‌ ಸಂಸ್ಥೆ ಅಧ್ಯಕ್ಷ ಎಸ್.ಪ್ರಮೀಳಾ, ಕಾರ್ಯದರ್ಶಿ ಟಿ.ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.