
ಸರಗೂರು: ಜ.18ರಂದು ಸರಗೂರಿನ ಅಖಿಲ ನಾಮದಾರಿಗೌಡ ಸಮುದಾಯ ಭವನದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಲಿದೆ.
ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಮೂಹ ಸಮಿತಿ ಅಧ್ಯಕ್ಷ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ‘ಶಿಕ್ಷಕರನ್ನು ಗೌರವಿಸಲು ನಮಗೆ ಸಿಕ್ಕಿರುವುದು ಸೌಭಾಗ್ಯ, ಶಿಕ್ಣಣ ಕಲಿತು ಎಲ್ಲರು ಒಂದೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ತಂದೆ, ತಾಯಿ, ಜೊತೆಗೆ ನಮಗೆ ವಿದ್ಯೆ ಕಲಿಸಿದ ಗುರುಗಳು ಅವರನ್ನು ನಮ್ಮ ಸ್ನೇಹ ಸಮೂಹ ಒಂದು ದೊಡ್ಡ ಕಾರ್ಯಕ್ರಮ ಮಾಡೋಣ’ ಎಂದರು.
ಹಳೆ ವಿದ್ಯಾರ್ಥಿಗಳ ಸಮೂಹ ಸಮಿತಿ ಅಧ್ಯಕ್ಷ ಡಾ.ಸೋಮಣ್ಣ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಎಸ್.ಆರ್. ಜಗದೀಶ್, ಮಹದೇವಶೆಟ್ಟಿ, ಬಿಲ್ಲಯ್ಯ, ಉದ್ಯಮಿ ಪ್ರಕಾಶ್, ಎಸ್.ಎ.ನಾಗೇಂದ್ರ, ಜಿ.ಕೃಷ್ಣಕುಮಾರ್, ಎಂ.ಸಿ.ರಾಘವೇಂದ್ರ, ಮಹಾವೀರ, ಕೃಷ್ಣ, ಇಲಿಯಾಸ್, ಸತೀಶ್, ಜಲೀಲ್, ಗಿರೀಶ್, ರೇಖಾ, ಪುಪ್ಪಾಂಜಲಿ, ಕಲಾವತಿ, ಗೋವಿಂದರಾಜು, ರಘು, ಬಸವರಾಜು, ಎಸ್.ಕೆ.ಕುಮಾರ್, ಎಂ.ಸಿ.ಬಾಬು, ಇದಾಯತ್, ಅಬ್ದುಲ್ ಮಾಲೀಕ್, ಸರಗೂರು ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಉದಯ್ ಕುಮಾರ್, ಬೀರ್ವಾಳ್ ಶಂಕರ, ಅಶೋಕ್, ಅಬ್ದುಲ್ ವಾಹೀದ್, ಬಿ.ಮಟಕೆರೆ ಸಂದರ್, ಬಾಡಗ ನಾಗರಾಜು, ಸುರೇಶ್ ನಾಯಕ, ಬೋರ್ಡ್ ನಾಗರಾಜು, ಅಬ್ದುಲ್ ಸಲ್ಮಾನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.