
ಹನೂರು: ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು 23 ನೇ ದಿನವೂ ಮುಂದುವರೆಯಿತು.
ರೈತ ಸಂಘ ಮಹಿಳಾ ಘಟಕದ ಸೆಲ್ವಂ ಮಾತನಾಡಿ, ‘ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಮಾಡುವ ತನಕ ಧರಣಿ ಕೈ ಬಿಡುವ ಮಾತೇ ಇಲ್ಲ’ ಎಂದರು.
ಬಿದರಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ‘ನಮ್ಮ ಭಾಗದ ಶಾಸಕರು ಎರಡುವರೆ ವರ್ಷಗಳಿಂದ ಪ್ರಯತ್ನ ಪಟ್ಟಿದ್ದರೆ ನಾವುಗಳು ಚಳಿಯಲ್ಲಿ ಧರಣಿ ನಡೆಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಪ್ರತಿಕ್ರಿಯಿಯನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಂದನಪಾಳ್ಯ ಗ್ರಾಮದ ಅರ್ಪುತ್ ರಾಜ್, ರೈತ ಮುಖಂಡ ಶೈಲೇಂದ್ರ, ಮಾಜಿ ಸೈನಿಕರಾದ ಜೋಸೆಫ್, ಪೀಟರ್, ಸೂಸೈ ಮಾಣಿಕ್ಯಂ, ಜಾನ್ ಜೋಸೆಫ್ , ಸಂದನಪಾಳ್ಯರಾಜ, ಮದಲೈ ಮುತ್ತು, ಬೆಳ್ಳಿ ತಮಡಿ, ಶಿವಣ್ಣ, ಸಾವಿತ್ರಿ, ಲತಾ, ಬೇಬಿ, ಬೊಮ್ಮ, ಶೆಲ್ಲಾ, ಕಮಲಾ ಮೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.