
ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಮುಚ್ಚಿರುವುದರಿಂದ ನೂರಾರು ಕುಟುಂಬಗಳು ಉದ್ಯೋಗ ಇಲ್ಲದೆ ಅತಂತ್ರವಾಗಿವೆ, ಕೂಡಲೇ ಸಫಾರಿ ಕೇಂದ್ರ ತೆರೆಯಬೇಕು ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳ ವತಿಯಿಂದ ಮಂಗಳವಾರ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ರೈತ ಮುಖಂಡ ಬೀರಂಬಳ್ಳಿ ಪ್ರಭಾಕರ್ ಮಾತನಾಡಿ, ‘ತಾಲ್ಲೂಕಿನ ಸಾವಿರಾರು ನಿರುದ್ಯೋಗಿ ಯುವಕರಿಗೆ ಸಫಾರಿ ಕೇಂದ್ರ ಇದ್ದ ಕಾರಣ ರೆಸಾರ್ಟ್‌ಗಳಲ್ಲಿ ಅಡುಗೆ ಭಟ್ಟರಿಂದ ಹಿಡಿದು ವಾಹನ ಚಾಲಕರಿಗೆ ಕೆಲಸ ಸಿಕ್ಕಿತ್ತು. ಕೈತುಂಬಾ ಸಂಬಳ ಬರುವಂತಾಗಿ ತಮ್ಮ ಕುಟುಂಬ ನಿರ್ವಹಣೆ ಮಾಡಲು ಸಹಾಯವಾಗಿತ್ತು, ಇದೀಗ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ’ ಎಂದರು.
‘ಬೀದಿಬದಿ ವ್ಯಾಪಾರಸ್ಥರು, ಬೇಕರಿ, ಟೀ ಅಂಗಡಿ, ಹೋಟೆಲ್ ಸೇರಿದಂತೆ ಹಲವಾರು ಸ್ವಯಂ ಉದ್ಯೋಗ ಮಾಡುವವರು ಅತಂತ್ರರಾಗಿದ್ದಾರೆ’ ಎಂದರು.
ತಹಶೀಲ್ದಾರ್ ಶ್ರೀನಿವಾಸ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಚಾ.ಶಿವಕುಮಾರ್, ಅನುಷ ಕೋಟೆ, ಕೃಷ್ಣ ಮಟಕೆರೆ, ಗೋವಿಂದರಾಜು, ಗ್ಯಾಸ್ ಪ್ರಕಾಶ್, ಪುಟ್ಟಮಾದು ಕೋಟೆ, ಉದಯ ಕೋಟೆ, ಕೃಷ್ಣ ಕುರ್ಣೇಗಾಲ, ಬಾಬು, ಸಮೀರ್, ಅಲ್ತಾಫ್, ಸತೀಶ್ ಕುಮಾರ್, ಶಿವಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.