ಎಚ್.ಡಿ.ಕೋಟೆ: ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಕೆಲ್ ಗುಂಡಿಯಲ್ಲಿ ಭಾನುವಾರ ತಡರಾತ್ರಿ ಒಂಟಿಸಲಗ ಪುಟ್ಟರಾಜು ಜಮೀನಿಗೆ ನುಗ್ಗಿ ತೆಂಗು, ಅಡಿಕೆ ಮತ್ತು ಇತರೆ ಬೆಳೆ ನಾಶಗೊಳಿಸಿ, ವಾಸದ ಮನೆ ಜಖಂಗೊಳಿಸಿದೆ.
ಮನೆಯಲ್ಲಿದ್ದ ಕುಟುಂಬ ಸದಸ್ಯರು ಜೀವಭಯದಲ್ಲಿ ಹೊರಗೆ ಓಡಿ ಹೋಗಿದ್ದೇವೆ. ಮನೆ ಸಂಪೂರ್ಣವಾಗಿ ಹಾನಿ ಮಾಡಿದೆ. ಕಾಡಂಚಿನ ಗ್ರಾಮದಲ್ಲಿ ಜೀವನ ಮಾಡುವುದು ಕಷ್ಟವಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
‘ಅರಣ್ಯ ಇಲಾಖೆಯು ಮಾನವ -ಪ್ರಾಣಿ ಸಂಘರ್ಷ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವನ ಹೇಳುತ್ತಿಲ್ಲ. ಬೆಳೆ ನಾಶ ಹಾಗೂ ಜಖಂಗೊಂಡ ಮನೆಗೆ ಪರಿಹಾರ ನೀಡಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತ್ತೂರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.