ಮೈಸೂರು: ನಗರದಲ್ಲಿ ಧಾರಾಕಾರ ಮಳೆ ಮುಂದುವರಿದೆ. ಮಂಗಳವಾರ ನಸುಕಿನಲ್ಲಿ ಸುರಿದ ಮಳೆಗೆ 4 ಕಡೆ ಮರಗಳು ಉರುಳಿ ಬಿದ್ದಿದ್ದರೆ, 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ಕೃಷ್ಣಮೂರ್ತಿಪುರಂ, ಚಾಮುಂಡಿಪುರಂ, ಸರಸ್ವತಿಪುರಂ ಹಾಗೂ ಮಿನಿ ವಿಧಾನಸೌಧದ ಎದುರು ಮರಗಳು ಉರುಳಿವೆ. ಜೆ.ಸಿ.ಬಡಾವಣೆ, ಕೆ.ಸಿ.ಬಡಾವಣೆ, ಜಯನಗರ, ಚಿನ್ನಗಿರಿಕೊಪ್ಪಲು ಬಡಾವಣೆಗಳಲ್ಲಿನ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಪಾಲಿಕೆಯ 3 ಅಭಯ್ ರಕ್ಷಣಾ ತಂಡಗಳು ರಕ್ಷಣಾ ಕಾರ್ಯ ನಡೆಸಿವೆ. ಜೆ.ಸಿ.ನಗರದ 3 ನೇ ಕ್ರಾಸ್ ನಲ್ಲಿ ಚರಂಡಿಯಲ್ಲಿ ಸಿಲುಕಿದ್ದ ಕರುವನ್ನು ರಕ್ಷಣಾ ತಂಡ ರಕ್ಷಿಸಿದೆ.
ನಸುಕಿನ 2 ಗಂಟೆಯ ಬಳಿಕ ನಗರದಲ್ಲಿ 4 ಸೆಂ.ಮೀ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.