
ಮೈಸೂರು: ‘ ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರ ಅರ್ಹತೆ–ಆಧಾರದ ಮೇಲೆ ಪಕ್ಷದ ಹೈಕಮಾಂಡ್ ಸ್ಥಾನಮಾನದ ಬಗ್ಗೆ ನಿರ್ಧಾರ ಮಾಡುತ್ತದೆ. ಯಾರು ಅಪಸ್ವರ ಎತ್ತುವ, ಅಪನಂಬಿಕೆ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್ ನಿರ್ಧಾರಕ್ಕೆ ನಡೆಯುತ್ತೇವೆ. ಅಧಿಕಾರ ಹಂಚಿಕೆ, ಆಡಳಿತದ ಅವಧಿ ಎಲ್ಲವೂ ಪಕ್ಷದ ಆಂತರಿಕ ವಿಚಾರಗಳು. ವಿರೋಧ ಪಕ್ಷಗಳು, ಮಾಧ್ಯಮಗಳು ಇದರ ಬಗ್ಗೆ ಊಹೆ ಮಾಡಿ ಮಾತನಾಡುವುದು ಸರಿಯಲ್ಲ’ ಎಂದರು.
‘ರಾಜಕಾರಣಕ್ಕೆ ಬಂದ ನಾವು ಯಾರೂ ಸನ್ಯಾಸಿಗಳಲ್ಲ. ಅರ್ಹತೆ– ಸಂದರ್ಭ ಕೂಡಿಬಂದಾಗ ಸಕಾಲದಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ. ಅದಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ’ ಎಂದರು.
'ಸಿದ್ದರಾಮಯ್ಯರ ನಂತರ ಅಹಿಂದ ನೇತೃತ್ವವನ್ನು ಸತೀಶ ಜಾರಕಿಹೊಳಿ ವಹಿಸಬೇಕು ಎಂದು ಡಾ. ಯತೀಂದ್ರ ಅವರು ಮನವಿ ಮಾಡಿದ್ದರು. ಅವರ ಹೇಳಿಕೆ ತಿರುಚಲಾಗಿದೆ. ಸಿದ್ದರಾಮಯ್ಯರ ಪರಿಕಲ್ಪನೆ ಒಪ್ಪಿ ಅಹಿಂದ ಚಳವಳಿಯಲ್ಲಿ ಪಾಲ್ಗೊಂಡವರಲ್ಲಿ ನಾನೂ ಒಬ್ಬ. ಇವತ್ತು ಅಹಿಂದ ಚಳವಳಿ ಉಳಿಯಬೇಕು. ಕಾಂಗ್ರೆಸ್‌ನ ಸಿದ್ದಾಂತಗಳೇ ಅಹಿಂದ ಸಿದ್ದಾಂತ ಕೂಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.