ADVERTISEMENT

ಮೈಸೂರು: ಕಡಿಮೆ ನೀರಿನಲ್ಲಿ ಭತ್ತ ಬೆಳೆದರೆ ಅಧಿಕ ಇಳುವರಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:53 IST
Last Updated 20 ನವೆಂಬರ್ 2025, 4:53 IST
ಕೆ.ಆರ್.ನಗರ ತಾಲ್ಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ಸಿರಿ ಸೀಡ್ಸ್ ಇಂಡಿಯಾ ವತಿಯಿಂದ ಮಂಗಳವಾರ ನಡೆದ ಸಿರಿ ಲೀಡರ್ಸ್ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಮಾತನಾಡಿದರು
ಕೆ.ಆರ್.ನಗರ ತಾಲ್ಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ಸಿರಿ ಸೀಡ್ಸ್ ಇಂಡಿಯಾ ವತಿಯಿಂದ ಮಂಗಳವಾರ ನಡೆದ ಸಿರಿ ಲೀಡರ್ಸ್ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಮಾತನಾಡಿದರು   

ಕೆ.ಆರ್. ನಗರ: ಭತ್ತ ಉಷ್ಣ ವಲಯದ ಬೆಳೆಯಾಗಿದ್ದು, ಕಡಿಮೆ ನೀರಿನಲ್ಲಿ ಭತ್ತ ಬೆಳೆದರೆ ಅಧಿಕ ಇಳುವರಿ ಪಡೆಯಬಹುದಾಗಿದೆ ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಹೇಳಿದರು.

ತಾಲ್ಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ಸಿರಿ ಸೀಡ್ಸ್ ಇಂಡಿಯಾ ವತಿಯಿಂದ ಮಂಗಳವಾರ ನಡೆದ ಸಿರಿ ಲೀಡರ್ಸ್ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭತ್ತ ನೀರಾವರಿ ಪ್ರದೇಶದ ಬೆಳೆ ಅಲ್ಲ, ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕುನಗನಹಳ್ಳಿಯಲ್ಲಿನ ಹಲವು ರೈತರು ಪಶು, ಹೂವು, ರೇಷ್ಮೆ, ಕೋಳಿ, ಕುರಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಕೆಲಸ ಮಾಡಿ ಯಶಸ್ವಿ ರೈತರಾಗಿದ್ದಾರೆ. ಇಲ್ಲಿನ ರೈತರು ಯಾರ ಮೇಲೂ ಅವಲಂಬಿತರಾಗದೇ ತಮ್ಮದೇ ಆದ ದುಡಿಮೆಯಲ್ಲಿ ತೊಡಗಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ADVERTISEMENT

ಭತ್ತದ ನಾಡು ಕೆ.ಆರ್.ನಗರ ತಾಲ್ಲೂಕಿನಲ್ಲಿ ಭತ್ತ ಕ್ರಮೇಣ ನಶಿಸಿ ಹೋಗುತ್ತಿದೆ. ರೈತರು ಸಾವಯವ ಕೃಷಿ ಬಿಟ್ಟು ಔಷಧ ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಭೂಮಿ ಬರುಡಾಗುತ್ತಿದೆ. ರೈತರು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಪ್ರಗತಿ ಪರ ರೈತ ಕನುಗನಹಳ್ಳಿ ಅರುಣ ಅವರು ಸಿರಿ ಲೀಡರ್ಸ್ ಭತ್ತ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಕಂಪನಿಯವರು ರೈತರಿಗೆ ಭತ್ತದ ಬೀಜ ಕೊಡುವಾಗ ₹50 ಹೆಚ್ಚಾಗಿ ಪಡೆದರೂ ಚಿಂತೆ ಇಲ್ಲ, ಆದರೆ ನೂರಕ್ಕೆ ನೂರರಷ್ಟು ಫಲಿತಾಂಶ ಕೊಡಬೇಕು. ವ್ಯವಸಾಯ ಕ್ಷೇತ್ರದಲ್ಲಿ ಭೂಮಿ ತಾಯಿಯಾದರೆ ಬೀಜ ಎನ್ನುವುದು ತಂದೆ ಇದ್ದಂತೆ. ಬೀಜ ಪ್ರಮುಖ ಪಾತ್ರ ವಹಿಸುತ್ತದೆ, ಸ್ಥಳೀಯ ರೈತರಿಂದ ಬೀಜ ಖರೀದಿಸಿದರೆ ರೈತರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಭತ್ತ ಲಾಭದಾಯಕವಾದ ಬೆಳೆಯಾಗಿ ಉಳಿದಿಲ್ಲ. ಖರ್ಚು ವೆಚ್ಚ ಲೆಕ್ಕ ಹಾಕಿದರೆ ವ್ಯವಸಾಯ ಮಾಡುವುದೇ ಬೇಡ ಎನಿಸುತ್ತದೆ. ಭತ್ತದ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ತೋಟಗಾರಿಕೆ, ವಾಣಿಜ್ಯ ಬೆಳೆಗಳಿಗೆ ಮಾರು ಹೋಗುತ್ತಿದ್ದಾರೆ. ಸಾವಯವ ಗೊಬ್ಬರ ಬಳಸಿ ವಿನೂತನವಾಗಿ ವ್ಯವಸಾಯ ಮಾಡಿದರೆ, ಭೂಮಿ ಫಲವತ್ತಾಗಿರುವಂತೆ ನೋಡಿಕೊಳ್ಳಬೇಕು. ರೈತರು ಉಪ ಕಸಬುವಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪ್ರಗತಿ ಪರ ರೈತ ಕನುಗನಹಳ್ಳಿ ಅರುಣ, ರೈತ ಮುಖಂಡರಾದ ವಿಶ್ವನಾಥ್, ಕೆ.ಎಸ್.ಕೃಷ್ಣ, ಪಿಡಿಒ ಮಂಜುನಾಥ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿದರು.

ಸಿರಿ ಸೀಡ್ಸ್ ತಾಂತ್ರಿಕ ಅಧಿಕಾರಿ ಮಧು, ಫೀಲ್ಡ್ ಅಧಿಕಾರಿ ದಶರಥ, ರೈತ ಸಂಘ ಕನುಗನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಜಿತೇಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ರಾಘವೇಂದ್ರ, ಕೆ.ಎಸ್.ಸೋಮಶೇಖರ್, ದೆಗ್ಗನಹಳ್ಳಿ ಮಹದೇವ್, ಸೋಮೇಗೌಡ, ಸಣ್ಣೇಗೌಡ, ನಂದಕುಮಾರ್, ವಿಜಿಕುಮಾರ್, ತಿಪ್ಪೂರು ಪ್ರಕಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.