
ಮೈಸೂರು: ಆತಿಥೇಯ ಮೈಸೂರು ಹಾಗೂ ಬಾಗಲಕೋಟೆಯ ತೋಟಗಾರಿಕೆ ಕಾಲೇಜು ಸ್ಪರ್ಧಿಗಳು ಗುರುವಾರ ಇಲ್ಲಿ ಆರಂಭಗೊಂಡ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ 16ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಮೊದಲ ದಿನದಂದು ಪಾರಮ್ಯ ಮೆರೆದರು.
ಮೈಸೂರು, ಬಾಗಲಕೋಟೆ, ಬೆಂಗಳೂರು, ಆಲಮೇಲ, ಅರಭಾವಿ, ಬೀದರ್, ದೇವಿಹೊಸೂರು, ಕೋಲಾರ, ಮುನಿರಾಬಾದ್, ಶಿರಸಿಗಳಲ್ಲಿನ ತೋಟಗಾರಿಕೆ ಕಾಲೇಜುಗಳ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ.
ಮೊದಲ ದಿನದ ಫಲಿತಾಂಶ: ಪುರುಷರು: 200 ಮೀ ಓಟ: ಬಿ.ಸೌಗವೇಶ್ (ತೋಟಗಾರಿಕೆ ಕಾಲೇಜು, ಮುನಿರಾಬಾದ್. ಕಾಲ: 24.75 ಸೆಕೆಂಡ್)–1. ಎಂ.ಎನ್. ದಿವಿನ್ (ತೋಟಗಾರಿಕೆ ಕಾಲೇಜು, ಬಾಗಲಕೋಟೆ)–2, ಎನ್. ಮನೋಜ್ ( ತೋಟಗಾರಿಕೆ ಕಾಲೇಜು, ಬೆಂಗಳೂರು)–3; 800 ಮೀ. ಓಟ: ಅಮಿತ್ ರಾಥೋಡ್ ( ಬಾಗಲಕೋಟೆ. ಕಾಲ: 2ನಿಮಿಷ, 13.30 ಸೆಕೆಂಡ್)–1, ಕೆ.ಜಿ.ಅಕ್ಷಯ್ ( ಬೆಂಗಳೂರು)–2, ಸಿ. ವಿರೂಪಾಕ್ಷಪ್ಪ (ಕೆಆರ್‌ಸಿಸಿಎಚ್, ಅರಬಾವಿ)–3.
ಲಾಂಗ್ ಜಂಪ್: ಹರೀಶ್ ಕೆ. (ಅರಭಾವಿ. ದೂರ: 5.58 ಮೀ)–1, ಎಸ್.ಎಂ. ಉತ್ಸವ್ (ಮುನಿರಾಬಾದ್)–2, ಎಂ.ಪಿ. ವೀರನಗೌಡ ( ಬಾಗಲಕೋಟೆ)–3; ಹೈಜಂಪ್: ಎಂ.ಪಿ. ವೀರನಗೌಡ (ಬಾಗಲಕೋಟೆ. ಎತ್ತರ: 1.66 ಮೀ)–1, ರೋಹನ್ ಜಾಧವ್ (ಕೋಲಾರ)–2, ಎ. ರೋಹಿತ್ ಕುಮಾರ್ (ಬೆಂಗಳೂರು)–3; ಶಾಟ್‌ಪಟ್: ಎಂ. ಸುಹಾಸ್ ಹಂಚಿನಾಳ (ಬಾಗಲಕೋಟೆ. ದೂರ: 10.45 ಮೀ.)–1, ವಿ. ಸಂದೀಪ್ (ಮೈಸೂರು)–2, ಎಸ್.ಸಿ. ಅಮೃತ್ (ಅರಬಾವಿ)–3.
ಡಿಸ್ಕಸ್ ಥ್ರೋ: ವಿ.ಸಂದೀಪ್ (ಮೈಸೂರು. ದೂರ: 28.22 ಮೀ)–1, ಸುಹಾಸ್ ಹಂಚಿನಾಳ (ಬಾಗಲಕೋಟೆ)–2, ಎಸ್.ಸಿ. ಅಮೃತ್ (ಅರಭಾವಿ)–3; ಜಾವೆಲಿನ್ ಥ್ರೋ: ವಿ. ಸಂದೀಪ್ (ಮೈಸೂರು. ದೂರ: 42.55 ಮೀ)–1, ರವಿ (ಬೀದರ್)–2, ಅಶೋಕ್ ಯರಗೇರಿ (ಅರಭಾವಿ)–3.4X100 ಮೀ. ರಿಲೆ: ಬಾಗಲಕೋಟೆ ತೋಟಗಾರಿಕೆ ಕಾಲೇಜು–1, ಮುನಿರಾಬಾದ್ ತೋಟಗಾರಿಕೆ ಕಾಲೇಜು–2, ಶಿರಸಿ ತೋಟಗಾರಿಕೆ ಕಾಲೇಜು–3.
ಮಹಿಳೆಯರು: 200 ಮೀ. ಓಟ: ಐ.ಎಚ್.ಲಾವಣ್ಯ (ಮುನಿರಾಬಾದ್. ಕಾಲ: 31.16 ಸೆಕೆಂಡ್)–1, ಆಶಾ ಜಿ.ಎನ್. (ಮೈಸೂರು)–2. ನಿಮ್ಯಾ (ಬೀದರ್)–3; 800 ಮೀ. ಓಟ: ಆರ್. ಪ್ರಿಯಾಂಕಾ ( ಬೆಂಗಳೂರು. ಕಾಲ: 3ನಿಮಿಷ, 04.06 ಸೆಕೆಂಡ್)–1, ಜಿ.ನವ್ಯಶ್ರೀ (ಡಿಎಸ್ಎಲ್‌ಡಿ, ದೇವಿಹೊಸೂರು)–2, ಗೀತಾ (ಬಾಗಲಕೋಟೆ)–3.
ಹೈಜಂಪ್: ತ್ರಿಷ್ಣಾ ಜಿ.ಎಸ್. (ಮೈಸೂರು. ಎತ್ತರ: 1.16 ಮೀ)–1, ವೈಶಾಲಿ ಕಣಸೋಗಿ (ಬಾಗಲಕೋಟೆ)–2, ಎ.ಎಸ್. ಅನಿತಾ ( ಕೋಲಾರ)–3; ಟ್ರಿಪಲ್ ಜಂಪ್: ಆ್ಯಮಿ ಸೆಬಾಸ್ಟಿಯನ್ (ಮುನಿರಾಬಾದ್. ದೂರ: 8.89 ಮೀ)–1, ಗಾಯತ್ರಿ ನಾಯಕ್ (ಬೀದರ್)–2, ರಕ್ಷಿತಾ ನಾಯಕ್ (ಬೆಂಗಳೂರು)–3.
ಶಾಟ್‌ಪಟ್: ಟಿ. ಭವ್ಯಾ ( ಮೈಸೂರು. ದೂರ: 7.18 ಮೀ)–1, ಎಚ್.ವಿ. ಚಂದನಾ (ದೇವಿಹೊಸೂರು)–2, ಬಿ.ಕೆ. ಇಂದು (ಕೋಲಾರ)–3; ಡಿಸ್ಕಸ್ ಥ್ರೋ: ಆರ್. ದಿವ್ಯಾ (ಕೋಲಾರ. ದೂರ: 20.86 ಮೀ)–1, ಸ್ಪೂರ್ತಿ ಎ.ಎನ್. (ಅರಬಾವಿ)–2, ಆರ್.ವಿಭಾ (ಬೆಂಗಳೂರು)–3; ಜಾವೆಲಿನ್ ಥ್ರೋ: ಆರ್. ಚಂದನಾ (ಮೈಸೂರು. ದೂರ: 21.29 ಮೀ)–1, ನೀಲಮ್ಮ (ಮುನಿರಾಬಾದ್)–2, ಬಿ.ಕೆ.ಇಂದು (ಕೋಲಾರ)–3; 4X100 ರಿಲೆ: ಮುನಿರಾಬಾದ್ ತೋಟಗಾರಿಕೆ ಕಾಲೇಜು–1, ಬೀದರ್ ತೋಟಗಾರಿಕೆ ಕಾಲೇಜು–2, ಬಾಗಲಕೋಟೆ ತೋಟಗಾರಿಕೆ ಕಾಲೇಜು–3.
ಕ್ರೀಡಾಕೂಟಕ್ಕೆ ಚಾಲನೆ
ಓವಲ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಕ್ರೀಡೋತ್ಕರ್ಷ-2025’ ಕ್ರೀಡಾಕೂಟವನ್ನು ಮೈಸೂರು ವಿ.ವಿ. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು. ಕೊಕ್ಕೊ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿ ಚೈತ್ರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದಕ್ಷಿಣ ವಲಯದ ಐಜಿಪಿ ಎಂ.ಬಿ.ಬೋರಲಿಂಗಯ್ಯ ಮೈಸೂರು ವಿ.ವಿ ಉಪನಿರ್ದೇಶಕ ಸಿ.ವೆಂಕಟೇಶ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಸಿ.ಎನ್.ಹಂಚಿಮನೆ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಅಧಿಕಾರಿ ವಿ.ಸುನೀಲ್ ಉಪ ಪರಿಸರ ಅಧಿಕಾರಿ ಜಯಲಕ್ಷ್ಮಿ ಎಂ.ಜೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಎಸ್.ಎಚ್ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಎಸ್.ಎನ್.ವಾಸುದೇವನ್ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಎಚ್.ಜೆ.ಮನೋಹರ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ರಾಜೀವ್ ಎಚ್.ಎನ್. ಕ್ರೀಡಾಕೂಟದ ಸಂಘಟನಾ ಅಧ್ಯಕ್ಷ ಎಂ.ಜಿ.ಕೆರೂಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.