
ಜೈಲು (ಪ್ರಾತಿನಿಧಿಕ ಚಿತ್ರ)
ಹುಣಸೂರು: ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ₹2.60 ಲಕ್ಷ ದಂಡ ವಿಧಿಸಿ ಶಿಕ್ಷೆ ನೀಡಿದ್ದು, ಹಣ ಪಾವತಿಸಲು ವಿಫಲವಾದಲ್ಲಿ 3 ತಿಂಗಳು ಜೈಲು ಸೆರೆ ವಾಸದ ತೀರ್ಪು ನೀಡಿ ಆದೇಶಿಸಿದೆ.
ನಗರದ ಕಲ್ಕುಣಿಕೆ ಬಡಾವಣೆ ನಿವಾಸಿ ಕೆ.ಕೃಷ್ಣ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ವಾಸಿ ಅಶ್ವತ್ಥ್ ಅವರಿಗೆ ಸಾಲದ ರೂಪದಲ್ಲಿ ನೀಡಿದ ಹಣಕ್ಕೆ ಖಾತ್ರಿಯಾಗಿ ಚೆಕ್ ಪಡೆದಿದ್ದರು. ಸಕಾಲಕ್ಕೆ ಸಾಲ ಮರುಪಾವತಿಸದೆ ಚೆಕ್ ಬೌನ್ಸ್ ಆದ ಕಾರಣ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಜ.13ರಂದು ತೀರ್ಪು ಪ್ರಕಟಿಸಿ ಆರೋಪಿಗೆ ₹ 2.60 ದಂಡ ಹಾಗೂ ತಪ್ಪಿದ್ದಲಿ 3 ತಿಂಗಳು ಸೆರೆವಾಸ ಎಂದು ಆದೇಶಿಸಿದ್ದಾರೆ.
ಪಿರ್ಯಾದಿ ಕೆ.ಕೃಷ್ಣ ಅವರ ಪರವಾಗಿ ವಕೀಲ ಎಂ.ಆರ್.ಹರೀಶ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.