ADVERTISEMENT

ಹುಣಸೂರು | 120 ಪ್ರಕರಣ, ₹19 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:53 IST
Last Updated 23 ಆಗಸ್ಟ್ 2025, 2:53 IST
<div class="paragraphs"><p>ಹುಣಸೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ತಾಲ್ಲೂಕು ಕೋಟ್ಪಾ ತಂಡ ದಾಳಿ ನಡೆಸಿ 120 ಪ್ರಕರಣ ದಾಖಲಿಸಿ ಮತ್ತು ಜಾಗೃತಿ ಮೂಡಿಸಿದರು</p></div>

ಹುಣಸೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ತಾಲ್ಲೂಕು ಕೋಟ್ಪಾ ತಂಡ ದಾಳಿ ನಡೆಸಿ 120 ಪ್ರಕರಣ ದಾಖಲಿಸಿ ಮತ್ತು ಜಾಗೃತಿ ಮೂಡಿಸಿದರು

   

ಹುಣಸೂರು: ತಾಲ್ಲೂಕಿನ ಉದ್ದೂರು ಕಾವಲ್‌, ಆಸ್ಪತ್ರೆ ಕಾವಲ್‌ ಮತ್ತು ಸಿಬಿಟಿ ಕಾಲೊನಿಯಲ್ಲಿ ತಾಲ್ಲೂಕು ಕೋಪ್ಟಾ ತಂಡ 120 ವಿವಿಧ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಕಾನೂನು ಬಾಹಿರ ತಂಬಾಕು ಉತ್ಪನ್ನ ಮಾರಾಟ ಮಾಡುವವರ ವಿರುದ್ಧ ದೂರು ದಾಖಲಿಸಿ; ₹19,900 ದಂಡ ವಿಧಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ನಿಷೇಧಿತ ಸ್ಥಳದಲ್ಲಿ ಮಾರಾಟ ಮಾಡುವುದು, ಶಾಲಾ ಸಮೀಪದಲ್ಲೂ ತಂಬಾಕು ಉತ್ಪನ್ನ ಮಾರುವಂತಿಲ್ಲ ಎಂದು ಜಾಗೃತಿ ಮೂಡಿಸಿದ್ದರೂ ಅನಧಿಕೃವಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಬೇಕರಿಗಳಲ್ಲಿ ಸಿಗರೇಟ್‌, ಗುಟ್ಕ ಮಾರಾಟ ಮಾಡುತ್ತಿದ್ದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಯಿತು ಎಂದು  ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ADVERTISEMENT

 ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಸೋಮಯ್ಯ, ಎ.ಎಸ್.ಐ. ಪುಟ್ಟನಾಯಕ, ಪಿಡಿಒ ಅರುಣ್‌ ಕುಮಾರ್.‌ ಹರೀಶ್.‌ ಶ್ರೀಧರ್.‌ ಮೋಹನ್‌, ಆರೋಗ್ಯ ಇಲಾಖೆಯ ಪುಟ್ಟಸ್ವಾಮಿ ಚಂದ್ರೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.