ADVERTISEMENT

ಬಸವ ಗೋಪುರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:52 IST
Last Updated 28 ನವೆಂಬರ್ 2023, 15:52 IST
ತಿ.ನರಸೀಪುರ ತಾಲ್ಲೂಕಿನ ಕಳ್ಳಿಪುರದಲ್ಲಿ ಬಸವ ಗೋಪುರವನ್ನು ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು
ತಿ.ನರಸೀಪುರ ತಾಲ್ಲೂಕಿನ ಕಳ್ಳಿಪುರದಲ್ಲಿ ಬಸವ ಗೋಪುರವನ್ನು ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು   

ತಿ.ನರಸೀಪುರ: ತಾಲ್ಲೂಕಿನ ಕಳ್ಳಿಪುರದ ಪಟ್ಟದ ಮಠದ ಬಸವ ಗೋಪುರವನ್ನು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಜನರಲ್ಲಿ ಭಕ್ತಿ ಭಾವಗಳಿರಬೇಕು. ಮನಸ್ಸಿನಲ್ಲಿ ಧಾರ್ಮಿಕತೆ ಚಿಂತನೆಗಳು ಹುಟ್ಟಬೇಕು. ಆಗ ಮಾತ್ರ ಶಾಂತಿಯುತ ಬದುಕಿಗೆ ದಾರಿದೀಪವಾಗುತ್ತದೆ. ಊರಿಗೊಂದು ಶಿವ ಮಂದಿರ, ಮಠ ಇದ್ದರೆ ಧಾರ್ಮಿಕತೆ ಹಾಗೂ ಜ್ಞಾನಾರ್ಜನೆ ಹೆಚ್ಚಾಗುತ್ತದೆ’ ಎಂದು ಹೇಳಿದರು.

ಕಳ್ಳಿಪುರ ಪಟ್ಟದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡಿದ ₹5 ಲಕ್ಷ ಸಹಾಯಧನದಿಂದ ಗೋಪುರ ನಿರ್ಮಾಣವಾಗಿದೆ. ಹಲವರು ಶ್ರೀಮಠದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ’ ಎಂದರು.

ADVERTISEMENT

ಎಂ.ಎಲ್. ಹುಂಡಿ ವಿರಕ್ತ ಮಠಾಧೀಶರಾದ ಗೌರಿಶಂಕರ ಸ್ವಾಮೀಜಿ, ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಚಿದರವಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿಲಿಗೆರೆಹುಂಡಿ ಮಠದ ಸ್ವಾಮೀಜಿ, ಸರಗೂರು ಮಠಾಧ್ಯಕ್ಷ ಬಸವರಾಜ ಸ್ವಾಮೀಜಿ, ಮುಖಂಡರಾದ ಗೌಡ್ರು ಶಿವಮಲ್ಲಪ್ಪ, ಕುರಿ ಮಹದೇವಪ್ಪ, ಕುಮಾರ, ಕಳ್ಳಿಪುರ ಮಹಾದೇವಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.