ADVERTISEMENT

ಸರಗೂರು | ಪಟ್ಟಣದ ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:57 IST
Last Updated 16 ಆಗಸ್ಟ್ 2025, 7:57 IST
ಸರಗೂರಿನ ವಾಹನ ಚಾಲಕರ ಸಂಘದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು
ಸರಗೂರಿನ ವಾಹನ ಚಾಲಕರ ಸಂಘದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು   

ಸರಗೂರು: ಪಟ್ಟಣದ ವಿವಿಧೆಡೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಸರಗೂರು ವಾಹನ‌ ಚಾಲಕರ ಸಂಘದಲ್ಲಿ ಶುಕ್ರವಾರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಬೀರ್ವಾಳ್ ಚಿಕ್ಕಣ್ಣ ಧ್ವಜಾರೋಹಣ ನೆರವೇರಿಸಿದರು.

ಸಂಘದ ಗೌರವಾಧ್ಯಕ್ಷ ಎಸ್.ಎಚ್. ಲಿಂಗರಾಜು, ವಿ.ಶಶಿ, ಪ್ರಧಾನ ಕಾರ್ಯದರ್ಶಿ ರವಿ, ಸಹ ಕಾರ್ಯದರ್ಶಿ ನಾಗೇಶ್, ಖಜಾಂಚಿ ಎಸ್.ಟಿ.ರವಿ, ಎಸ್.ಆರ್.ಜಗದೀಶ್, ವೆಂಕಟೇಶ್, ಎಸ್.ಎಚ್. ಗೋವಿಂದರಾಜು, ಚಾಮರಾಜು, ನಾಗರಾಜು, ಸುಭಾನ್ ಹಾಜರಿದ್ದರು.

ADVERTISEMENT

ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ:

ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಕೃಷ್ಣಮೂರ್ತಿ, ವಸಂತ ಕುಮಾರ್, ತೇಜಸ್ವಿ, ರಂಗನಾಯಕ ಹಾಗೂ ಸಿಬ್ಬಂದಿ ಹಾಜರಿದ್ದರು.

ಸರಗೂರು ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ಸರಗೂರು ಪೊಲೀಸ್ ಠಾಣೆ ಪಿಎಸ್ಐ ಕಿರಣ್, ಎಎಸ್ಐ ಕೃಷ್ಣಕುಮಾರ್, ಗೋಪಾಲ್, ಇಮ್ರಾನ್, ಪುರುಷೋತ್ತಮ್, ಜಗದೀಶ್, ಶೋಭಾ, ಆನಂದ್ ಹಾಜರಿದ್ದರು.

ಲಯನ್ಸ್ ಅಕಾಡೆಮಿ: ಶಾಲೆಯಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಬಿ.ನಾಗರಾಜು ಧ್ವಜಾರೋಹಣ ನೆರವೇರಿಸಿದರು.

ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್‌.ಡಿ.ಕೋಟೆ ಯೋಧ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಅಕಾಡಮಿ ಶಾಲೆ ಮಕ್ಕಳು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿ ಕುರಿತ ಅದ್ಭುತ ನೃತ್ಯ ರೋಮಾಂಚನಗೊಳಿಸಿತು.

ಲಯನ್ಸ್ ಸಂಸ್ಥೆ:

ಕಾರ್ಯದರ್ಶಿ ಎಸ್.ಎಸ್.ಪ್ರಭುಸ್ವಾಮಿ, ಎಸ್.ವಿ.ಯೋಗೀಶ್, ಬ್ರಹ್ಮದೇವಯ್ಯ, ಎಸ್.ಎಸ್. ಸೋಮಪ್ರಭ, ಎನ್.ಎಸ್.ಪ್ರತಾಪ್, ಎಸ್.ನಾರಾಯಣ್, ಕೆ.ಸುರೇಶ್ ಜೈನ್, ಎಸ್.ಪಿ.ಪ್ರಸಾದ್, ಲಯನ್ಸ್ ಅಕಾಡೆಮಿ ಶಾಲೆ ಪ್ರಾಂಶುಪಾಲ್ ದಾಸಚಾರಿ ಹಾಜರಿದ್ದರು.

ಸರಗೂರು ತಾಲ್ಲೂಕು ಪಂಚಾಯತಿಯಲ್ಲಿ ಸ್ವಾತಂತ್ರ್ಯೋತ್ಸವ ಅಂವಾಗವಾಗಿ ಇಒ ಪ್ರೇಮ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಯೋಜನಾಧಿಕಾರಿ ಮಹದೇವಸ್ವಾಮಿ, ಎಒ ಮಧುಚಂದ್ರ, ವರದನಾಯಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.