ಮುಡಾ
ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ತನಿಖೆಗೆ ಸದ್ಯ ಅಲ್ಪವಿರಾಮ ಬಿದ್ದಿದ್ದು, ದಾಖಲೆಗಳು ಇರುವ ಕೊಠಡಿಗಳು ‘ಸೀಲ್’ ಸ್ಥಿತಿಯಲ್ಲೇ ಇವೆ.
ಪ್ರಕರಣದ ತನಿಖೆಗಾಗಿ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಪಿ.ಎಸ್. ದೇಸಾಯಿ ಅವರ ಏಕಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಿ ಜುಲೈ 14ರಂದು ಆದೇಶ ಹೊರಡಿಸಿದ್ದು, ವಿಚಾರಣೆಗಾಗಿ ಆಯೋಗವು ಮುಡಾ ಕಚೇರಿಗೆ ಇನ್ನೂ ಬಂದಿಲ್ಲ.
ಜುಲೈ 1ರಂದು ಸರ್ಕಾರ ನೇಮಿಸಿದ್ದ ಆರ್. ವೆಂಕಟಾಚಲಪತಿ ನೇತೃತ್ವದ ತನಿಖಾ ಸಮಿತಿಯು ಜುಲೈ 13ರವರೆಗೆ ತನಿಖೆ ನಡೆಸಿ ತೆರಳಿದೆ. ಕಡತಗಳು ಇರುವ ಕೊಠಡಿಗಳನ್ನು ಸೀಲ್ ಮಾಡಲಾಗಿದ್ದು, ಅವು ಹಾಗೆಯೇ ಇವೆ. ಕಂದಾಯ ಪಾವತಿ ಸೇರಿದಂತೆ ಮುಡಾದ ಬಹುತೇಕ ಸೇವೆಗಳು ಎಂದಿನಂತೆ ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.