ADVERTISEMENT

ಮೈಸೂರು | ‘ಜನುಮದ ಜೋಡಿ’ ರಸಸಂಜೆ 7ರಂದು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:51 IST
Last Updated 31 ಮಾರ್ಚ್ 2024, 15:51 IST

ಮೈಸೂರು: ಇಲ್ಲಿನ ಗಾನಲಹರಿ ತಂಡದಿಂದ ಏ.7ರಂದು ಸಂಜೆ 5ಕ್ಕೆ ನಗರದ ಗಾನ ಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ‘ಜನುಮದ ಜೋಡಿ’ ಎಂಬ ಚಲನಚಿತ್ರ ಗೀತೆಗಳ ರಸಸಂಜೆ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಚಿತ್ರರಂಗದ ದಿಗ್ಗಜರಾದ ರಾಜ್‌ಕುಮಾರ್‌– ಪಾರ್ವತಮ್ಮ, ವಿಷ್ಣುವರ್ಧನ್– ಭಾರತಿ, ಅಂಬರೀಶ್‌– ಸುಮಲತಾ ಜೋಡಿಗೆ ಅರ್ಪಿಸಲಾಗಿದೆ. ಬ್ರೈಟ್‌ ಸ್ಕಾಲರ್ಸ್‌ ಲರ್ನಿಂಗ್‌ ಸೆಂಟರ್‌ ಅವರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದು, ಆರ್‌.ಜೆ. ಕಿರಣ್‌ ಹೆಬ್ಬಾಳೆ ನಿರೂಪಣೆಯಿದೆ ಎಂದು ತಂಡದ ರೂಪಶ್ರೀ ಶೇಷಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT