ಜಯಪುರ; ‘ಕನ್ನಡ ನಾಡಿನಲ್ಲಿ ಪ್ರಜಾವಾಣಿ ಪತ್ರಿಕೆಯು ವಿಶ್ಚಾಸಾರ್ಹತೆಯ ಪ್ರತೀಕವಾಗಿದೆ’ ಎಂದು ಮೈಸೂರು ಗ್ರಾಮಾಂತರ ವಲಯ ಬಿಇಒ ಪ್ರಕಾಶ್ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಜಾವಾಣಿ ಓದು’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಏಳೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ವಿಶ್ಚಾಸಾರ್ಹ ಸುದ್ದಿಗಳನ್ನು ನೀಡುತ್ತಾ, ಜನರ ಜೀವನದೊಂದಿಗೆ ಬೆರೆತಿದೆ. ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಪ್ರಜಾವಾಣಿ ಇಲ್ಲದೆ ಬಹುತೇಕರಿಗೆ ದಿನಚರಿಯೇ ಪ್ರಾರಂಭವಾಗುವುದಿಲ್ಲ’ ಎಂದರು.
‘ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ನಿತ್ಯವೂ ಪತ್ರಿಕೆಯನ್ನು ನಿರಂತರವಾಗಿ ಓದಿದರೆ ಸಾಮಾನ್ಯ ಜ್ಞಾನವನ್ನು ಗಳಿಸಿಕೊಳ್ಳಬಹುದು. ಗಟ್ಟಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು’ ಎಂದು ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಡಿ.ಮಾಲೇಗೌಡ ತಿಳಿಸಿದರು.
ಬರಡನಪುರ ಗುರು ಮಹಾಂತೇಶ್ವರ ಮಠದ ಪೀಠಾಧ್ಯಕ್ಷ ಪರಶಿವಮೂರ್ತಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾನ್ನಿಧ್ಯ ವಹಿಸಿದ್ದರು.
ಸನ್ಮಾನ:
ಹೋಬಳಿಯ ಹತ್ತು ಸರ್ಕಾರಿ ಶಾಲೆಗಳಿಗೆ ‘ಪ್ರಜಾವಾಣಿ’ ಪತ್ರಿಕೆಯನ್ನು ಪ್ರಾಯೋಜಿಸಿರುವ ದಾನಿ ಶ್ರೀಕಾಂತ ಎಸ್. ಅವರನ್ನು ಇದೇ ಸಂದರ್ಭದಲ್ಲಿ ಪತ್ರಿಕಾ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸಿದ್ದರಾಮ, ಎಸ್‌ಡಿಎಂಸಿ ಅಧ್ಯಕ್ಷ ಡಿ.ಬಿ.ನಾಗಣ್ಣ, ಉಪತಹಶೀಲ್ದಾರ್ ಮಂಜುನಾಥ್, ಎಎಸ್ಐ ಪುಟ್ಟಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ವೈದ್ಯನಾಥ್, ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ಪ್ರಕಾಶ್, ಸಹಾಯಕ ವ್ಯವಸ್ಥಾಪಕ ಎಸ್.ಸಂತೋಷ ಕುಮಾರ್, ಸ್ಥಳೀಯ ಅರೆಕಾಲಿಕ ವರದಿಗಾರ ಬಿಳಿಗಿರಿ, ಮುಖಂಡರಾದ ಬಿ.ಮಲ್ಲಪ್ಪ, ಸಣ್ಣಸ್ವಾಮಿ, ಬಸವರಾಜಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.