ADVERTISEMENT

ಮುಡಾ ಅಧ್ಯಕ್ಷ ಕೆ.ಮರೀಗೌಡ ವಿರುದ್ಧ ಸ್ವಪಕ್ಷೀಯರಿಂದಲೇ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 23:13 IST
Last Updated 20 ಆಗಸ್ಟ್ 2024, 23:13 IST
<div class="paragraphs"><p>ಕೆ.ಮರೀಗೌಡ</p></div>

ಕೆ.ಮರೀಗೌಡ

   

ಜಯಪುರ (ಮೈಸೂರು): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ವಿರುದ್ಧ ಸ್ವಪಕ್ಷೀಯರಾದ ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಇಲ್ಲಿನ ಮಾವಿನಹಳ್ಳಿ ತೋಟದ ಮನೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಆಪ್ತ ಸಿದ್ದೇಗೌಡ  ‘ಮುಡಾದ ಗೊಂದಲಕ್ಕೆ ಅಧ್ಯಕ್ಷ ಕೆ.ಮರೀಗೌಡನೇ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರದೆಯೇ ಪತ್ರ ವ್ಯವಹಾರ ನಡೆಸಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ’ ಎಂದು ಆರೋಪಿಸಿದರು.

ADVERTISEMENT

‘ಮುಖ್ಯಮಂತ್ರಿ ರಾಜಕೀಯ ಜೀವನಕ್ಕೆ ಮರೀಗೌಡನೇ ಕಪ್ಪುಚುಕ್ಕೆಯಾಗಿದ್ದಾನೆ. ಮುಡಾ ನಿವೇಶನದಲ್ಲಿ ಹಲವು ರಾಜಕಾರಣಿಗಳು ಫಲಾನುಭವಿಗಳಿದ್ದಾರೆ. ಅಕ್ರಮವಾಗಿ ನಿವೇಶನ ಪಡೆದವರ ಮೇಲೆ ಕ್ರಮವಾಗಲಿ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಆಧಾರ ರಹಿತ ಆರೋಪ ಮಾಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ವಿರೋಧ ಪಕ್ಷದವರಿಗೆ ಸಹಿಸಲಾಗದೆ ಪಿತೂರಿ ನಡೆಸುತ್ತಿದ್ದಾರೆ’ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.