
ಮೈಸೂರು: ‘ಕೈವಾರ ತಾತಯ್ಯ ಸಮಾಜವನ್ನು ಸುಧಾರಿಸಿದರು. ತಾರತಮ್ಯ, ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದರು’ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಕೈವಾರ ತಾತಯ್ಯ ಬಣಜಿಗ ಯುವಕರ ಸಂಘವು ಮಂಗಳವಾರ ಆಯೋಜಿಸಿದ್ದ 300ನೇ ಜಯಂತ್ಯೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ‘ಮಹನೀಯರ ಜಯಂತಿಗಳು ಆಚರಣೆಗೆ ಸೀಮಿತವಾಗದೆ, ಅವರ ಆದರ್ಶ ತತ್ವಗಳನ್ನು ನಾವೂ ಮೈಗೂಡಿಸಿಕೊಳ್ಳಬೇಕು’ ಎಂದರು.
ಬಿಜೆಪಿ ಮುಖಂಡ ಪ್ರತಾಪ್ ಸಿಂಹ, ಮುಖಂಡರಾದ ಆನಂದ್ ಶೆಟ್ಟಿ, ರಘುರಾಮ್ ವಾಜಪೇಯಿ, ಪ್ರಶಾಂತ್ ಗೌಡ, ನವೀನ್ ಕುಮಾರ್, ಶ್ರೀನಾಥ್ ಬಾಬು, ಪರಮೇಶ್ ಗೌಡ, ಗುರುರಾಜ್ ಶೆಟ್ಟಿ, ಎಸ್.ಎನ್.ರಾಜೇಶ್, ವಿನಯ್ ಉಮೇಶ್ ಶ್ರೀರಾಂಪುರ ಕುಮಾರ್, ನೀತು, ಆರ್.ಶೇಖರ್, ರಮೇಶ್, ಗುರುಪ್ರಸಾದ್, ಪ್ರಮೋದ್ ಗೌಡ, ನಂದ, ರವಿಚಂದ್ರ, ಸಂದೇಶ್, ಧನಲಕ್ಷ್ಮಿ, ಪ್ರಿಯಾಂಕಾ, ಶಿಲ್ಪಾ ಪಾಲ್ಗೊಂಡಿದ್ದರು.
ಬಲಿಜ ವಿದ್ಯಾರ್ಥಿ ನಿಲಯ: ಸರಸ್ವತಿಪುರಂನ ಬಲಿಜ ವಿದ್ಯಾರ್ಥಿನಿಲಯದಲ್ಲಿ ನಡೆದ ಜಯಂತಿಯಲ್ಲಿ ಭಾವಚಿತ್ರಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿ, ‘ಕೈವಾರ ತಾತಯ್ಯ ನಾಡು ಕಂಡ ಅಪರೂಪದ ಸಂತ. ಶಾಂತಿ, ಪ್ರೀತಿ, ಸರಳ ಬದುಕನ್ನು ಸಾರಿದ ಮಹಾನ್ ಚೇತನ. ಕವಿಯಾಗಿ, ಸಮಾಜಮುಖಿ ಚಿಂತಕರಾಗಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಿದರು. ಕಾಲಜ್ಞಾನ, ನಾರೇಯಣ ಕವಿ ಶತಕ, ಸೂಕ್ಷ್ಮ ಭೀಮಲಿಂಗ ಮತ್ತು ಪ್ರಪಂಚ ನಾರೇಯಣ ಕವಿ ಪದ್ಯಗಳು ತಾತಯ್ಯ ಅವರು ಬರೆದ ಕೃತಿಗಳಾಗಿವೆ’ ಎಂದರು.
ಸಂಘದ ಅಧ್ಯಕ್ಷ ಎಂ.ನಾರಾಯಣ್, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಖಜಾಂಚಿ ಕೆ.ಚಂದ್ರಶೇಖರ್, ನಿರ್ದೇಶಕರಾದ ಬಿ.ಕೆ. ಸುರೇಶ್, ಟಿ.ಎಸ್.ರಮೇಶ್, ಎ.ಚನ್ನಕೇಶವ, ನಿವೃತ್ತ ಶಿಕ್ಷಕ ರಮೇಶ್, ಮಂಜುನಾಥ್, ವ್ಯವಸ್ಥಾಪಕ ಎಚ್.ಆರ್.ವೆಂಕಟೇಶ್, ನಿಲಯ ಪಾಲಕ ರಾಮಕೃಷ್ಣಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.