ADVERTISEMENT

ರಂಗಭೂಮಿಗೆ ಕನ್ನಡದ ಕೊಡುಗೆ ಅಪಾರ: ವಿಮರ್ಶಕ ರವೀಂದ್ರ ತ್ರಿಪಾಠಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:46 IST
Last Updated 6 ನವೆಂಬರ್ 2025, 4:46 IST
ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಭಾರತೀಯ ರಂಗಭೂಮಿ ರೂಪಿಸುವಲ್ಲಿ ಕನ್ನಡದ ಕೊಡುಗೆ’ ವಿಷಯದ ಕುರಿತು ರವೀಂದ್ರ ತ್ರಿಪಾಠಿ ಮಾತನಾಡಿದರು. ರಂಗಕರ್ಮಿ ಪ್ರಸನ್ನ ‍ಪಾಲ್ಗೊಂಡಿದ್ದರು
ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಭಾರತೀಯ ರಂಗಭೂಮಿ ರೂಪಿಸುವಲ್ಲಿ ಕನ್ನಡದ ಕೊಡುಗೆ’ ವಿಷಯದ ಕುರಿತು ರವೀಂದ್ರ ತ್ರಿಪಾಠಿ ಮಾತನಾಡಿದರು. ರಂಗಕರ್ಮಿ ಪ್ರಸನ್ನ ‍ಪಾಲ್ಗೊಂಡಿದ್ದರು   

ಮೈಸೂರು: ‘ಕನ್ನಡದ ರಂಗಕರ್ಮಿ ಗಳು ಉತ್ತರ ಭಾರತದ ರಂಗ ಭೂಮಿಗೆ ಪರಿಣಾಮಕಾರಿ ಕೊಡುಗೆ ನೀಡಿದ್ದಾರೆ. ಆದರೆ, ಪ್ರಸ್ತುತ ಕನ್ನಡದಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗಿದೆ’ ಎಂದು ವಿಮರ್ಶಕ ರವೀಂದ್ರ ತ್ರಿಪಾಠಿ ಅಭಿಪ್ರಾಯಪಟ್ಟರು.

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ‘ಭಾರತೀಯ ರಂಗಭೂಮಿ ರೂಪಿಸುವಲ್ಲಿ ಕನ್ನಡದ ಕೊಡುಗೆ’ ವಿಷಯದ ಕುರಿತು ಬುಧವಾರ ಹಾರ್ಡ್ವಿಕ್‌ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಿರೀಶ್‌ ಕಾರ್ನಾಡ್‌ ಅವರ ಬರಹಗಳು ಹಿಂದಿ ರಂಗಭೂಮಿಯ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಕಾರ್ನಾಡ್‌ ರಚಿಸಿದ ಯಾವುದಾದರೊಂದು ನಾಟಕ ಇರುತ್ತಿತ್ತು. ಅವರ ನಾಗಮಂಡಲ, ಹಯವದನ ನಾಟಕಗಳು ಇಂದಿಗೂ ಪ್ರದರ್ಶನವಾಗುತ್ತಿವೆ’ ಎಂದರು.

ADVERTISEMENT

‘ಹಿಂದಿ ರಂಗಭೂಮಿಯಲ್ಲಿ ಬಾಬಾ ಎಂದೇ ಪ್ರಸಿದ್ಧಿ ಪಡೆದ ಬಿ.ವಿ.ಕಾರಂತರು ಕನ್ನಡದ ಆಸ್ತಿಯಾಗಿದ್ದರೂ, ಭಾರತೀಯ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಸಂಗೀತದಲ್ಲಿನ ಅವರ ಪ್ರಯೋಗಗಳನ್ನು ಉತ್ತರ ಭಾರತದ ರಂಗಭೂಮಿಯೂ ಒಪ್ಪಿಕೊಂಡು ಪಾಲಿಸುತ್ತಿದೆ. ಪ್ರಸನ್ನ ಅವರು ಪ್ರಸ್ತುತ ಹಿಂದಿ ಹಾಗೂ ಕನ್ನಡದ ಬಾಂಧವ್ಯಕ್ಕೆ ಕೊಂಡಿಯಾಗಿದ್ದು, ಮುಂದೆ ಈ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಮೂಡಿದೆ’ ಎಂದು ಹೇಳಿದರು.

‘ಕನ್ನಡದ ಸಂಸ್ಕೃತಿ ಹಾಗೂ ಸಂಗೀತ ಹಿಂದಿ ರಂಗಭೂಮಿಗೆ ದೊಡ್ಡ ಕೊಡುಗೆ ನೀಡಿದೆ, ಕನ್ನಡದ ಅನಂತಮೂರ್ತಿ ಅವರ ಕಥೆಗಳು, ರಂಗ ಬರಹಗಳು ಇಂದಿಗೂ ಹಿಂದಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಅದಕ್ಕೆ ಸಾಕ್ಷಿ’ ಎಂದು ತಿಳಿಸಿದರು.

ರಂಗಕರ್ಮಿ ಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.