ADVERTISEMENT

ಮೈಸೂರು | ‘ರಂಗಭೂಮಿ ವರ್ತಮಾನದ ಕನ್ನಡಿ’: ಸಿ. ಬಸವಲಿಂಗಯ್ಯ

ರಂಗ ತರಬೇತಿ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:08 IST
Last Updated 19 ಆಗಸ್ಟ್ 2025, 6:08 IST
ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಭಾನುವಾರ ‘ನಿರಂತರ ಸಹಜ ರಂಗ 2025’ ರಂಗ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಸಿ. ಬಸವಲಿಂಗಯ್ಯ, ಎಂ.ಡಿ. ಸುದರ್ಶನ್‌, ಎಸ್. ನರೇಂದ್ರ ಕುಮಾರ್, ಪ್ರಸಾದ್ ಕುಂದೂರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡರು
ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಭಾನುವಾರ ‘ನಿರಂತರ ಸಹಜ ರಂಗ 2025’ ರಂಗ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಸಿ. ಬಸವಲಿಂಗಯ್ಯ, ಎಂ.ಡಿ. ಸುದರ್ಶನ್‌, ಎಸ್. ನರೇಂದ್ರ ಕುಮಾರ್, ಪ್ರಸಾದ್ ಕುಂದೂರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡರು   

ಮೈಸೂರು: ‘ರಂಗಭೂಮಿ ವರ್ತಮಾನದ ಕನ್ನಡಿಯಾಗಿ, ಸಮಾಜದಲ್ಲಿ ಪ್ರಶ್ನಿಸುವ ಮನೋಭಾವನೆಗಳನ್ನು ಬೆಳೆಸಬೇಕು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಆಶಿಸಿದರು.

ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಭಾನುವಾರ ‘ನಿರಂತರ ಸಹಜ ರಂಗ 2025’ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸಮಾಜದ ಆಗುಹೋಗು, ತಲ್ಲಣಗಳಿಗೆ ಸ್ಪಂದಿಸುವ ರಂಗಭೂಮಿ ಸದಾ ಜೀವಂತ ಮಾಧ್ಯಮ’ ಎಂದರು.

ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಎಸ್. ನರೇಂದ್ರ ಕುಮಾರ್, ‘ಸಂವಿಧಾನದ ಮೌಲ್ಯಗಳು ಹಾಗೂ ಆಶಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕು. ಸಂವಿಧಾನ ಹೇಳಿದ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಮುಂದಿನ ತಲೆಮಾರಿಗೆ ಬಿತ್ತಲಿ’ ಎಂದು ಆಶಿಸಿದರು.

ADVERTISEMENT

ಶಿಬಿರಾರ್ಥಿಗಳೇ ರೂಪಿಸಿದ ‘ಅಭಿಮುಖ’ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ನಿವೃತ್ತ ಪ್ರಾಧ್ಯಾಪಕರಾದ ಅಪ್ಪಾಜಿ ಗೌಡ, ಮಂಗಳಾ, ಎಸ್‌ಬಿಐ ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಲಿಂಗಯ್ಯ, ನಿರಂತರದ ಪ್ರಸಾದ್ ಕುಂದೂರು, ಎಂ.ಎಂ. ಸುಗುಣ, ಶ್ರೀನಿವಾಸ್ ಪಾಲಹಳ್ಳಿ, ಹರಿಪ್ರಸಾದ್ ಬೇಸಾಯಿ, ಶಿರಾ ಸೋಮಶೇಖರ್, ರಾಜೇಶ್ ಹೆಬ್ಬಾರ್ ಉಪಸ್ಥಿತರಿದ್ದರು.

ಸಹಜ ರಂಗ ತರಬೇತಿ ಶಿಬಿರವು ಸೆಪ್ಟೆಂಬರ್ 18ರಂದು ನಾಟಕ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.