ADVERTISEMENT

ಹುಣಸೂರು: ಮಳೆ ತಂಬಾಕು ಬ್ಯಾರನ್ ಕುಸಿತ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:04 IST
Last Updated 31 ಮೇ 2025, 14:04 IST
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಭರತವಾಡಿಯ ರೈತ ಗಂಗಾಧರಯ್ಯ ಅವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಮಳೆಗೆ ಕುಸಿದಿರುವುದು
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಭರತವಾಡಿಯ ರೈತ ಗಂಗಾಧರಯ್ಯ ಅವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಮಳೆಗೆ ಕುಸಿದಿರುವುದು   

ಹುಣಸೂರು: ಹನಗೋಡು ಹೋಬಳಿ ಭಾಗದಲ್ಲಿ ಶುಕ್ರವಾರ ಬಿದ್ದ ಮಳೆಗೆ ಭರತವಾಡಿಯ ಗಂಗಾಧರಯ್ಯ ಅವರ ತಂಬಾಕು ಹದಗೊಳಿಸುವ ಬ್ಯಾರನ್ ಛಾವಣಿ ಕುಸಿದಿದೆ.

ಭಾರಿ ಮಳೆಗೆ ರೈತ ಗಂಗಾಧರಯ್ಯ ಅವರ ತಂಬಾಕು ಹದಗೊಳಿಸುವ ಬ್ಯಾರನ್ ಕುಸಿದಿದ್ದರಿಂದ ಕಟ್ಟಡದೊಳಗೆ ಕಟ್ಟಿ ಹಾಕಿದ್ದ  ಮೂರು ಕುರಿಗಳಲ್ಲಿ ಎರಡು ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿ ನಿಯಮಾನುಸಾರ ಪ್ರತಿ ಕುರಿಗೆ ₹ 4 ಸಾವಿರದಂತೆ ₹ 8 ಸಾವಿರ ಪರಿಹಾರ ಕಂದಾಯ ಇಲಾಖೆಯಿಂದ ಪ್ರಾಕೃತಿಕ ವಿಕೋಪ ಯೋಜನೆಯಲ್ಲಿ ವಿತರಿಸಲಾಗಿದೆ ಎಂದು ಹನಗೋಡು ಹೋಬಳಿ ರಾಜಸ್ವ ನಿರೀಕ್ಷಣಾಧಿಕಾರಿ ನಂದೀಶ್ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT