ADVERTISEMENT

ಕೆ.ಆರ್.ನಗರ ಬಳಿ ಕಾರು– ಬೈಕ್ ನಡುವೆ ಅಪಘಾತ: ಹುಣಸೂರು ತಾಲ್ಲೂಕಿನ ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:32 IST
Last Updated 28 ಫೆಬ್ರುವರಿ 2026, 7:32 IST
ನಂಜುಂಡಸ್ವಾಮಾಚಾರ್ ಮತ್ತು ನೇತ್ರಾವತಿ
ನಂಜುಂಡಸ್ವಾಮಾಚಾರ್ ಮತ್ತು ನೇತ್ರಾವತಿ   

ಕೆ.ಆರ್.ನಗರ: ತಾಲ್ಲೂಕಿನ ಕಗ್ಗೆರೆ ಬಳಿ ಶುಕ್ರವಾರ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೈಸೂರಿನ ಹೆಬ್ಬಾಳ್ ನಿವಾಸಿ ನಂಜುಂಡಸ್ವಾಮಾಚಾರ್ (51) ಮತ್ತು ಅವರ ಪತ್ನಿ ನೇತ್ರಾವತಿ (49) ಮೃತ ದಂಪತಿ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಇವರು ಮೂಲತಃ ಹುಣಸೂರು ತಾಲ್ಲೂಕಿನ ಬೀರ್ನಹಳ್ಳಿಯವರು. ಹಲವು ವರ್ಷಗಳಿಂದ ಮೈಸೂರಿನಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು.

ತಾಲ್ಲೂಕಿನ ರಾಮನಾಥಪುರ ಬಳಿ ಇರುವ ಹೊಸೂರು ಗ್ರಾಮದಲ್ಲಿ ಸಂಬಂಧಿಯೊಬ್ಬರ ಸಾವಿನ ಸುದ್ದಿ ತಿಳಿದು ಪತಿ-ಪತ್ನಿ ಇಬ್ಬರೂ ಬೈಕ್ ನಲ್ಲಿ ಮೈಸೂರಿನಿಂದ ಹೊಸೂರಿಗೆ ಹೊರಟಿದ್ದರು. ತಾಲ್ಲೂಕಿನ ಕಗ್ಗೆರೆ ಬಳಿ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.